ಕಿರಣ್ ಶಾಸ್ತ್ರಿಯಿಂದ ಇಡೀ ಮನೆಗೆ ತೊಂದರೆ; ತಿರುಗಿಬಿದ್ದ ವೈಷ್ಣವಿ

Updated on: Sep 08, 2026 | 8:47 AM

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ವೈಷ್ಣವಿ ಹಾಗೂ ಕಿರಣ್ ಶಾಸ್ತ್ರಿ ನಡುವೆ ಸ್ನಾನಗೃಹದ ಬಳಕೆಯ ಸಮಯದ ಕುರಿತು ಜಗಳ ನಡೆದಿತ್ತು. ಶಾಸ್ತ್ರಿ ಅವರ ವಿಳಂಬದಿಂದ ಇತರರಿಗೆ ತೊಂದರೆಯಾಗಿದ್ದಕ್ಕೆ ವೈಷ್ಣವಿ ಸಿಟ್ಟಾಗಿದ್ದರು. ತಮ್ಮ ಕೋಪವನ್ನು ವ್ಯಕ್ತಪಡಿಸಲು ಕೂಗಾಡಿದಾಗ, ಇದನ್ನು ಪ್ರಶ್ನಿಸಿದವರಿಗೆ ವೈಷ್ಣವಿ ಖಾರವಾಗಿ ತಿರುಗೇಟು ನೀಡಿದರು. ಈ ಘಟನೆ ಮನೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳಾದ ವೈಷ್ಣವಿ ಮತ್ತು ಕಿರಣ್ ಶಾಸ್ತ್ರಿ ನಡುವೆ ಬಾತ್​ರೂಂ ಬಳಕೆಯ ವಿಷಯವಾಗಿ ತೀವ್ರ ವಾಗ್ವಾದ ನಡೆದಿದೆ. ಈ ಘಟನೆಯು ಮನೆಯ ಸದಸ್ಯರಲ್ಲಿ ಅಸಮಾಧಾನ ಮೂಡಿಸಿತು. ಮನೆಯ ನಿಯಮದ ಪ್ರಕಾರ, ಸ್ನಾನಗೃಹವನ್ನು ಬಳಸಲು ಎಲ್ಲರಿಗೂ ಒಟ್ಟಾಗಿ ಒಂದೂವರೆ ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಕಿರಣ್ ಶಾಸ್ತ್ರಿ ಅವರು ದೀರ್ಘ ಸಮಯ ತೆಗೆದುಕೊಂಡಿದ್ದರಿಂದ ಇತರರಿಗೆ ತೊಂದರೆಯಾಯಿತು.

ಕಿರಣ್ ಶಾಸ್ತ್ರಿ ಸ್ನಾನಗೃಹದಿಂದ ಹೊರಬರಲು ವಿಳಂಬ ಮಾಡುತ್ತಿದ್ದರಿಂದ ವೈಷ್ಣವಿ ಅವರ ಸಿಟ್ಟು ಹೆಚ್ಚಾಯಿತು. ‘ಕಿರಣ್ ಶಾಸ್ತ್ರಿ ಅವರಿಗೆ ಬೇಗ ಬರೋದಕ್ಕೆ ಹೇಳಿ. ಎಷ್ಟೊತ್ತು ಮಾಡೋದು? ನಿಮ್ಮಿಂದ ಎಲ್ಲರಿಗೂ ತೊಂದರೆ ಆಗುತ್ತೆ’ ಎಂದು ವೈಷ್ಣವಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಿರಣ್ ಹಾಗೂ ವೈಷ್ಣವಿ ಮಧ್ಯೆ ಕಿತ್ತಾಟ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More