BBK9: ಕೊನೇ ಗಳಿಗೆಯಲ್ಲಿ ಒಂದೇ ಒಂದು ಚಾನ್ಸ್​ ಕೊಡಿ ಅಂತ ಗೋಗರೆದ ಬಿಗ್​ ಬಾಸ್​ ಸ್ಪರ್ಧಿಗಳು

| Updated By: ಮದನ್​ ಕುಮಾರ್​

Updated on: Dec 01, 2022 | 1:09 PM

Bigg Boss Kannada: ಹಲವು ತಿರುವುಗಳನ್ನು ಪಡೆದುಕೊಂಡು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಕಾರ್ಯಕ್ರಮ ಸಾಗುತ್ತಿದೆ. ಪ್ರತಿ ವಾರ ಕಳೆದಂತೆ ಆಟದ ರೋಚಕತೆ ಹೆಚ್ಚುತ್ತಿದೆ.

ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಶೋನಲ್ಲಿ ಹಲವು ಬಗೆಯ ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಈ ವಾರ ಅನೇಕ ಸ್ಪರ್ಧಿಗಳು ಅವರ ಫ್ಯಾಮಿಲಿ ಸದಸ್ಯರನ್ನು ಭೇಟಿ ಆಗುವ ಚಾನ್ಸ್​ ಪಡೆದಿದ್ದರು. ಆದರೆ ಕೆಲವರು ಟಾಸ್ಕ್​ನಲ್ಲಿ ಉತ್ತಮವಾಗಿ ಪರ್ಫಾರ್ಮ್​ ಮಾಡದ ಕಾರಣದಿಂದ ಕುಟುಂಬದವರನ್ನು ಭೇಟಿಯಾಗುವ ಅವಕಾಶ ಕೈತಪ್ಪಿ ಹೋಗುವ ಸಂದರ್ಭ ಎದುರಾಯಿತು. ಈ ವೇಳೆ ‘ಒಂದೇ ಒಂದು ಚಾನ್ಸ್​ ಕೊಡಿ ಬಿಗ್​ ಬಾಸ್​’ ಎಂದು ಸ್ಪರ್ಧಿಗಳು ಗೋಗರೆದಿದ್ದಾರೆ. ಅದರ ಪ್ರೋಮೋವನ್ನು ಕಲರ್ಸ್​ ಕನ್ನಡ (Colors Kannada) ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 01, 2022 01:09 PM