‘ಕೆಜಿಎಫ್ ತಾತ ಕೃಷ್ಣ ರಾವ್ಗೆ ಶ್ವಾಸಕೋಶದ ಸೋಂಕು ಉಂಟಾಗಿದೆ, ಪರಿಸ್ಥಿತಿ ಗಂಭೀರವಾಗಿದೆ’; ಸಂಬಂಧಿಯಿಂದ ಮಾಹಿತಿ
ಶ್ವಾಸಕೋಶದ ಸೋಂಕು ಉಂಟಾಗಿರುವುದರಿಂದ ಅವರನ್ನು ಬೆಂಗಳೂರಿನ ಸೀತಾಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯದ ಬಗ್ಗೆ ಸೋದರ ಸಂಬಂಧಿ ನಂದಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಕೆಜಿಎಫ್’ (KGF) ತಾತ ಎಂದೇ ಫೇಮಸ್ ಆದ ಕೃಷ್ಣ ರಾವ್ (Krishna Rao) ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಶ್ವಾಸಕೋಶದ ಸೋಂಕು ಉಂಟಾಗಿರುವುದರಿಂದ ಅವರನ್ನು ಬೆಂಗಳೂರಿನ ಸೀತಾಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯದ ಬಗ್ಗೆ ಸೋದರ ಸಂಬಂಧಿ ನಂದಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಕೃಷ್ಣ ರಾವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ’ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Latest Videos