ಮುಖ್ಯಮಂತ್ರಿಗಳ ನಿವಾಸಕ್ಕೆ ಸಚಿವ ಮತ್ತು ಸಚಿವರಲ್ಲದವರ ದೌಡು, ಸಂಪುಟ ವಿಸ್ತರಣೆಯ ಸಾಧ್ಯತೆ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್ ಟಿ ನಗರದಲ್ಲಿರುವ ನಿವಾಸಕ್ಕೆ ಹಲವಾರು ಸಚಿವರು ಮತ್ತು ಇತರ ಬಿಜೆಪಿ ನಾಯಕರು ಆಗಮಿಸಿದ್ದರು.
ಬೆಂಗಳೂರು: ಗುರುವಾರ ಬೆಳಗ್ಗೆ ಸಚಿವರು ಮತ್ತು ಸಚಿವರಲ್ಲದವರ ದಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ನಿವಾಸಕ್ಕೆ ದೌಡಾಯಿಸಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಡಾ ಕೆ ಸುಧಾಕರ್, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಸಿಪಿ ಯೋಗೇಶ್ವರ, ಇತ್ತೀಚಿಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮದ್ದು ಹನುಮೆಗೌಡ (Muddu Hanumegowda), ಒಬ್ಬ ಗುರೂಜಿ ಮತ್ತು ಇನ್ನೂ ಹಲವಾರು ಗಣ್ಯರು ಬೆಂಗಳೂರಿನ ಆರ್ ಟಿ ನಗರದಲ್ಲಿರುವ (RT Nagar) ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದ್ದರು. ಸಚಿವ ಸಂಪುಟ ವಿಸ್ತರಣೆಯ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos