ಬೆಳಗಾವಿಯಲ್ಲಿ ರಸ್ತೆ ಅಪಘಾತ, ಮೇಲ್ಸೇತುವೆ ಮೇಲಿಂದ ಪಕ್ಕದ ರಸ್ತೆಗೆ ಬಿದ್ದ ಇಬ್ಬರು ಸ್ಕೂಟರ್ ಸವಾರಿಗೆ ಗಂಭೀರ ಗಾಯ
ವೇಗವಾಗಿ ಚಲಿಸುತ್ತಿದ್ದ ಮಾರುತಿ ವ್ಯಾನೊಂದು ಎರಡು ಸ್ಕೂಟರ್ಗಳಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಸ್ಕೂಟರ್ ಗಳ ಸವಾರರು ಸೇತುವೆ ಮೇಲಿಂದ ಕೆಳಗಿನ ರಸ್ತೆಗೆ ಬಿದ್ದಿದ್ದಾರೆ.
ಬೆಳಗಾವಿ: ನಗರದ ಟಿಳಕವಾಡಿಯ (Tilakwadi) ಮೂರನೇ ರೇಲ್ವೆ ಸೇತುವೆ (railway bridge) ಬಳಿ ಇಂದು ಮಧ್ಯಾಹ್ನ ನಡೆದಿರುವ ರಸ್ತೆ ಅಪಘಾತ (accident) ಭೀತಿ ಮೂಡಿಸುತ್ತದೆ. ವೇಗವಾಗಿ ಚಲಿಸುತ್ತಿದ್ದ ಮಾರುತಿ ವ್ಯಾನೊಂದು ಎರಡು ಸ್ಕೂಟರ್ಗಳಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಸ್ಕೂಟರ್ ಗಳ ಸವಾರರು ಸೇತುವೆ ಮೇಲಿಂದ ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಾನ್ ಚಾಲಕನಿಗೂ ಗಂಭೀರ ಗಾಯಗಳಾಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos