ಮುರಿದು ಬಿತ್ತು ಬಿಗ್​ಬಾಸ್ ಮನೆಯ ಗಾಢ ಸ್ನೇಹ: ದೂರಾದ ಸಂತು-ಪಂತು

Updated on: Jan 10, 2024 | 4:02 PM

Bigg Boss: ಈ ಬಾರಿಯ ಬಿಗ್​ ಬಾಸ್​ನ ಆಕರ್ಷಣೆಗಳಲ್ಲಿ ಒಂದೆಂದರೆ ಅದು ಸಂತು-ಪಂತು. ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರ ಗೆಳೆತನ ಬಿಗ್​ಬಾಸ್​ನ ಹೈಲೆಟ್​ ಪಾಯಿಂಟ್​ಗಳಲ್ಲಿ ಒಂದು. ಆದರೆ ಈ ಇಬ್ಬರ ಗೆಳೆತನ ಮುರಿದು ಬಿದ್ದಿದೆ? ಕಾರಣ ಏನು?

ಬಿಗ್​ಬಾಸ್ (BiggBoss) ಮನೆಯಲ್ಲಿ ಹಲವು ಹೈಲೆಟ್ ಅಂಶಗಳಿವೆ. ಸಂಗೀತಾರ ಹೋರಾಟ, ಕಾರ್ತಿಕ್​ರ ಇಬ್ಬಗೆ ನೀತಿ, ವಿನಯ್​ರ ಅಗ್ರೆಶನ್, ಡ್ರೋನ್ ಪ್ರತಾಪ್​ರ ಯೋಜನೆಗಳು, ನಮ್ರತಾರ ಡ್ಯಾನ್ಸ್, ಹೊರಗೆ ಹೋಗ ಮೈಖಲ್​ರ ಟಾಸ್ಕ್ ಮಾಡುವ ರೀತಿ. ಇದೆಲ್ಲದರ ಜೊತೆಗೆ ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರ ಗೆಳೆತನವೂ ಹೈಲೆಟ್ ಅಂಶವಾಗಿತ್ತು. ಆದರೆ ಇದೀಗ ಈ ಇಬ್ಬರ ಗೆಳೆತನ ಮುರಿದು ಬಿದ್ದಂತಿದೆ. ಟಾಸ್ಕ್ ನಿಂದ ವರ್ತೂರು ಸಂತು, ತುಕಾಲಿಯನ್ನು ಹೊರಗಿಟ್ಟಿದ್ದೇ ಇದಕ್ಕೆ ಕಾರಣವಾಗಿದೆ. ಅದಾದ ಬಳಿಕ ನಡೆದ ಬೆಳವಣಿಗೆಗಳಲ್ಲಿ ತುಕಾಲಿಯ ಮಾತಿನಿಂದ ವರ್ತೂರು ಬೇಸರ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಏನೇನಾಗಿದೆ ಎಂಬುದು ಇಂದಿನ ಎಪಿಸೋಡ್ ಬಳಿಕ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More