ಎಲಿಮಿನೇಷನ್​ಗೂ ಮುನ್ನ ಕಣ್ಣೀರು ಹಾಕಿದ ವರ್ತೂರು ಸಂತೋಷ್​, ತುಕಾಲಿ ಸಂತೋಷ್​

|

Updated on: Jan 14, 2024 | 9:32 AM

ಬಿಗ್​ ಬಾಸ್​ ಶೋನಲ್ಲಿ ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಅವರು ಆತ್ಮೀಯವಾಗಿದ್ದರು. ಇಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಎಮಿಲಿನೇಷನ್​ ವೇಳೆ ಇಬ್ಬರೂ ಎಮೋಷನಲ್​ ಆಗಿದ್ದಾರೆ. ಅವರು ಕಣ್ಣೀರು ಹಾಕಿದ್ದು ನೋಡಿ ಇನ್ನುಳಿದ ಮನೆ ಮಂದಿ ಕೂಡ ಭಾವುಕರಾಗಿದ್ದಾರೆ.

ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಶೋ ಆಗಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಈಗ ಕೊನೇ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಈ ವಾರ ಇದ್ದ 8 ಸದಸ್ಯರ ಪೈಕಿ ಒಬ್ಬರ ಎಲಿಮಿನೇಷನ್​ ಆಗಿದೆ. ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ (Tukali Santhosh) ಅವರಲ್ಲಿ ಒಬ್ಬರು ಔಟ್​ ಆಗುವುದು ಖಚಿತ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಬಿಗ್​ ಬಾಸ್​ ಶೋನಲ್ಲಿ ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ (Varthur Santhosh) ಅವರು ತುಂಬಾ ಆತ್ಮೀಯವಾಗಿದ್ದರು. ಇಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಕೊನೇ ಹಂತ ಬಂದಾಗ ಇಬ್ಬರೂ ಎಮೋಷನಲ್​ ಆಗಿದ್ದಾರೆ. ಈವರೆಗೆ ತಾವು ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಕಣ್ಣೀರು ಹಾಕಿದ್ದು ನೋಡಿ ಇನ್ನುಳಿದ ಮನೆ ಮಂದಿ ಕೂಡ ಭಾವುಕರಾಗಿದ್ದಾರೆ. ಈ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಜನವರಿ 14ರಂದು ಈ ಸಂಚಿಕೆ ಪ್ರಸಾರ ಆಗಲಿದೆ. ‘ಕಲರ್ಸ್​ ಕನ್ನಡ’ ಜೊತೆ ‘ಜಿಯೋ ಸಿನಿಮಾ’ ಒಟಿಟಿಯಲ್ಲೂ ಉಚಿತವಾಗಿ ಶೋ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ