‘ಇವಳು ಡೇಂಜರ್, ಕೆಟ್ಟ ಮೇಲೆ ನನಗೆ ಬುದ್ಧಿ ಬಂತು’; ತನಿಷಾ ಬಗ್ಗೆ ಫಿಲ್ಟರ್ ಇಲ್ಲದೇ ಮಾತಾಡಿದ ವರ್ತೂರು
ವರ್ತೂರು ಸಂತೋಷ್ ಹೇಳಿದ ಮಾತನ್ನು ತನಿಷಾ ಕುಪ್ಪಂಡ ಒಪ್ಪಿಕೊಂಡಿಲ್ಲ. ‘ನೀನು ಬಾಯಿಗೆ ಬಂದಂತೆ ಮಾತನಾಡಬೇಡ. ಇಷ್ಟ ಆಗಿಲ್ಲ ಎಂದರೆ ಅದನ್ನು ಮಾತ್ರ ಹೇಳು. ನನ್ನ ಕ್ಯಾರೆಕ್ಟರ್ ಬಗ್ಗೆ ನೀನು ಸರ್ಟಿಫಿಕೇಟ್ ಕೊಡಬೇಡ’ ಎಂದು ತನಿಷಾ ಹೇಳಿದ್ದಾರೆ. ಇಬ್ಬರ ನಡುವೆ ಜೋರು ಜಗಳ ನಡೆದಿದೆ.
ಬಿಗ್ ಬಾಸ್ (Bigg Boss Kannada) ಆರಂಭ ಆಗಿ ಕೆಲವು ದಿನಗಳು ಕಳೆದಾಗಿನಿಂದ ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ (Tanisha Kuppanda) ಅವರು ಸ್ನೇಹಿತರಾಗಿದ್ದರು. ಅನೇಕ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರು ಜೊತೆಯಾಗಿ ಸಾಕಷ್ಟು ಸಮಯ ಕಳೆದಿದ್ದಾರೆ. ಇಷ್ಟು ದಿನ ಆಪ್ತವಾಗಿದ್ದ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ನಡುವೆ ಈಗ ಬಿರುಕು ಮೂಡಿದೆ. ಅದಕ್ಕೆ ಕಾರಣ ಆಗಿರುವುದು ವರ್ತೂರು ಸಂತೋಷ್ (Varthur Santhosh) ಅವರ ಫಿಲ್ಟರ್ ಇಲ್ಲದ ಮಾತು. ಯಾವುದೇ ಮುಚ್ಚುಮರೆ ಇಲ್ಲದೇ ಅವರು ತನಿಷಾ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಇವಳು ತುಂಬ ಡೇಂಜರ್’ ಎಂದು ಅವರು ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ.
ಈ ವಾರ ಸಂಗೀತಾ ಶೃಂಗೇರಿ ಅವರು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಯಲ್ಲಿ ಯಾರಿಗೆ ಯಾವ ಕೆಲಸ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಕಾರ್ತಿಕ್ ಮಹೇಶ್ ಅವರು ತನಿಷಾಗೆ ಸಹಾಯ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಚರ್ಚೆ ಆಯಿತು. ಸ್ವಲ್ಪ ಸಮಯದ ನಂತರ ಇದೇ ವಿಚಾರವನ್ನು ಇಟ್ಟುಕೊಂಡು ವರ್ತೂರು ಸಂತೋಷ್, ತುಕಾಲಿ ಸಂತೋಷ್ ಮತ್ತು ತನಿಷಾ ಕುಪ್ಪಂಡ ಚರ್ಚೆ ಮಾಡಿದರು.
ಇದನ್ನೂ ಓದಿ: ಆಪ್ತ ಗೆಳೆಯ ವರ್ತೂರು ಸಂತು ಬೆನ್ನಿಗೆ ಚೂರಿ ಹಾಕಿದರೇ ತುಕಾಲಿ ಸಂತೋಷ್?
‘ಕಾರ್ತಿಕ್ ನನಗೆ ಸಹಾಯ ಮಾಡಿದ್ದಾನೆ’ ಎಂದು ತನಿಷಾ ಹೇಳಿದ್ದನ್ನು ವರ್ತೂರು ಸಂತೋಷ್ ಒಪ್ಪಿಕೊಳ್ಳಲಿಲ್ಲ. ‘ಅದು ಯಾವ ಮಾಯೆಯಲ್ಲಿ ಬಂದು ಹೆಲ್ಪ್ ಮಾಡಿದ್ದಾನೋ ಗೊತ್ತಿಲ್ಲ. ಬೆಳಗ್ಗೆ ಕ್ಯಾಪ್ಟನ್ ಕೇಳಿದಾಗ ಇದೇ ಮಾತನ್ನು ಇವಳು ಯಾಕೆ ಹೇಳಲಿಲ್ಲ’ ಎಂದು ವರ್ತೂರು ಸಂತೋಷ್ ಪ್ರಶ್ನಿಸಿದರು. ಬಳಿಕ ತುಕಾಲಿ ಕಡೆ ತಿರುಗಿ, ‘ಅಣ್ಣ.. ಇವಳು ಎಂಥಾ ಓಳ್ ಗೊತ್ತಾ? ಇವಳನ್ನು ಎಲ್ಲಾದರೂ ಸಾಕ್ಷಿಗೆ ಕರೆದುಕೊಂಡು ಹೋದರೆ ನಮಗೆ ಸರಿಯಾದ ಮರ್ಯಾದೆ ಸಿಗುತ್ತೆ. ಇವಳು ಸಖತ್ ಡೇಂಜರ್. ಇವಳ ಎದುರೇ ಹೇಳುತ್ತಿದ್ದೇನೆ. ಇವಳ ಜೊತೆ ಮಾತನಾಡುವಾಗ ಹುಷಾರು. ಕೆಟ್ಟ ಮೇಲೆ ನನಗೆ ಬುದ್ಧಿ ಬಂತು. ಕೊನೆಯಲ್ಲಿ ನನಗೆ ಜ್ಞಾನೋದಯ ಆಯಿತು. ನಮ್ಮ ಮುಂದೆಯೇ ರೊಟ್ಟಿ ತಿರುವಿ ಹಾಕಿದ್ದಾಳೆ’ ಎಂದು ವರ್ತೂರು ಸಂತೋಷ್ ಹೇಳಿದರು.
ಇದನ್ನೂ ಓದಿ: ವರ್ತೂರು ಸಂತು ಮೇಲೆ ಸುಳ್ಳು ಆರೋಪ ಮಾಡಿದ ಕಾರ್ತಿಕ್ ಕಿಚ್ಚನ ಕ್ಲಾಸ್
ವರ್ತೂರು ಸಂತೋಷ್ ಹೇಳಿದ ಮಾತನ್ನು ತನಿಷಾ ಕುಪ್ಪಂಡ ಒಪ್ಪಿಕೊಂಡಿಲ್ಲ. ‘ನನಗೆ ಕಾರ್ತಿಕ್ ಮೇಲೆ ಕೋಪ ಇದೆ ನಿಜ. ಹಾಗಂತ ಅವನು ಮಾಡಿದ್ದನ್ನು ಮಾಡಿಲ್ಲ ಅಂತ ಹೇಳೋಕೆ ಆಗಲ್ಲ. ನೀನು ಬಾಯಿಗೆ ಬಂದಂತೆ ಮಾತನಾಡಬೇಡ. ಇಷ್ಟ ಆಗಿಲ್ಲ ಎಂದರೆ ಅದನ್ನು ಮಾತ್ರ ಹೇಳು. ನನ್ನ ಕ್ಯಾರೆಕ್ಟರ್ ಬಗ್ಗೆ ನೀನು ಸರ್ಟಿಫಿಕೇಟ್ ಕೊಡಬೇಡ’ ಎಂದು ತನಿಷಾ ಹೇಳಿದ್ದಾರೆ. ಇಬ್ಬರನ್ನೂ ಸಮಾಧಾನ ಮಾಡಲು ತುಕಾಲಿ ಸಂತೋಷ್ ಪ್ರಯತ್ನಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ