AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ನೇಹಿತ್​ ಅಲ್ಲ ಕಾರ್ತಿಕ್ ಅಣ್ಣ ಅನ್ನೋದು ನಮ್ರತಾಗೆ ಗೊತ್ತಾಗಿದೆ’; ಎಲ್ಲರ ಎದುರು ಹೇಳಿದ ಸುದೀಪ್

ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಜಗಳ ಆಗಲು ಕಾರಣ ಏನು ಎನ್ನುವ ವಿಚಾರ ಚರ್ಚೆಗೆ ಬಂತು. ಈ ಬಗ್ಗೆ ಸುದೀಪ್ ಅವರು ಎಲ್ಲರ ಅಭಿಪ್ರಾಯ ಕೇಳುತ್ತಿದ್ದರು. ಆಗ ತುಕಾಲಿ ಸಂತೋಷ್ ಅವರು ನಮ್ರತಾ ವಿಚಾರ ಎಳೆದು ತಂದರು. ‘ಕಾರ್ತಿಕ್ ಮೊದಲಿನಂತೆ ಸಂಗೀತಾ ಜೊತೆ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು’ ಎಂದರು ತುಕಾಲಿ ಸಂತೋಷ್.

‘ಸ್ನೇಹಿತ್​ ಅಲ್ಲ ಕಾರ್ತಿಕ್ ಅಣ್ಣ ಅನ್ನೋದು ನಮ್ರತಾಗೆ ಗೊತ್ತಾಗಿದೆ’; ಎಲ್ಲರ ಎದುರು ಹೇಳಿದ ಸುದೀಪ್
ಬಿಗ್​ ಬಾಸ್ ಕನ್ನಡ
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​|

Updated on: Jan 14, 2024 | 11:56 AM

Share

ಇತ್ತೀಚೆಗೆ ಕಾರ್ತಿಕ್ ಮಹೇಶ್ (Karthik Mahesh) ಹಾಗೂ ನಮ್ರತಾ (Namratha Gowda) ಅವರು ಆಪ್ತವಾಗಿದ್ದಾರೆ. ಇವರ ಮಧ್ಯೆ ಇರೋ ಬಂಧ ಬಿಗಿಯಾಗಿದೆ. ಇದು ಎಲ್ಲರಿಗೂ ತಿಳಿಯುತ್ತಿದೆ. ಆದರೆ, ಫಿನಾಲೆ ಟಿಕೆಟ್ ವಿಚಾರದಲ್ಲಿ ಹಾಗಾಗಿಲ್ಲ. ಅವರು ನಮ್ರತಾ ಬದಲು ಸಂಗೀತಾ ಶೃಂಗೇರಿಗೆ ವೋಟ್ ಹಾಕಿದ್ದರು. ಇದರಿಂದ ನಮ್ರತಾ ಸಾಕಷ್ಟು ಬೇಸರಗೊಂಡಿದ್ದಾರೆ. ಇದನ್ನು ಕಾರ್ತಿಕ್ ಎದುರೇ ಹೇಳಿಕೊಂಡಿದ್ದರು. ಈಗ ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ‘ಕಾರ್ತಿಕ್ ಅಸಲಿ ಮುಖ ನಮ್ರತಾಗೆ ಗೊತ್ತಾಗಿದೆ’ ಎಂದು ಸುದೀಪ್ (Sudeep) ಹೇಳಿದ್ದಾರೆ.

ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಜಗಳ ಆಗಲು ಕಾರಣ ಏನು ಎನ್ನುವ ವಿಚಾರ ಚರ್ಚೆಗೆ ಬಂತು. ಈ ಬಗ್ಗೆ ಸುದೀಪ್ ಅವರು ಎಲ್ಲರ ಅಭಿಪ್ರಾಯ ಕೇಳುತ್ತಿದ್ದರು. ಆಗ ತುಕಾಲಿ ಸಂತೋಷ್ ಅವರು ನಮ್ರತಾ ವಿಚಾರ ಎಳೆದು ತಂದರು. ‘ಕಾರ್ತಿಕ್ ಮೊದಲಿನಂತೆ ಸಂಗೀತಾ ಜೊತೆ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು. ಈಗ ಸೈಡ್ ಬಿ (ನಮ್ರತಾ) ಕಡೆ ಅವರು ಉತ್ತಮವಾಗಿದ್ದಾರೆ’ ಎಂದರು ತುಕಾಲಿ ಸಂತೋಷ್.

‘ಇಂಡಿಯಾ-ಪಾಕ್ ಮ್ಯಾಚ್ ಬಗ್ಗೆ ಹೇಳಿ ಅಂದ್ರೆ ಆಸ್ಟ್ರೇಲಿಯಾನ ಎಳೆದು ತರುತ್ತಿದ್ದೀರಲ್ಲ. ನಮ್ರತಾಗೆ ಫಿನಾಲೆ ಟಿಕೆಟ್​ ವಿಚಾರದಲ್ಲಿ ಕಾರ್ತಿಕ್ ಬಗ್ಗೆ ಸರಿಯಾದ ಕ್ಲಾರಿಟಿ ಸಿಕ್ಕಿದೆ. ಅವರು ಅದನ್ನು ಬಹಳ ಉತ್ತಮವಾಗಿ ವ್ಯಕ್ತಪಡಿಸಿದ್ದಾರೆ. ಕಾರ್ತಿಕ್ ಅವರು ಮಾತು ಬಾರದೆ ನಿಂತಿದ್ದರು. ಹೊರಗಡೆ ಹೋದವನು ನನ್ನ ಅಣ್ಣ ಅಲ್ಲ, ಪಕ್ಕದಲ್ಲಿ ಕುಳಿತವನು ಎಂಬುದು ಗೊತ್ತಾಗಿದೆ. ಅಣ್ಣನೋ, ಅಪ್ಪನೋ ಅನ್ನೋ ಗೊಂದಲ ಅವರಿಗಿದೆ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ‘ಫಿನಾಲೆಗೆ ವಿನಯ್​ ಬರಬಾರದು’: ಸುದೀಪ್​ ಮುಂದೆ ಪೂರ್ತಿ ಅಸಮಾಧಾನ ಹೊರಹಾಕಿದ ಸಂಗೀತಾ

ಈ ವಾರ ಫಿನಾಲೆ ಟಿಕೆಟ್ ಪಡೆಯೋ ವಿಚಾರದಲ್ಲಿ ಸಾಕಷ್ಟು ಸ್ಪರ್ಧೆ ಇತ್ತು. ಅತಿ ಹೆಚ್ಚು ಅಂಕ ಪಡೆದ ಮೂವರಿಗೆ ವೋಟ್ ಮಾಡಬೇಕಿತ್ತು. ಈ ರೇಸ್​ನಲ್ಲಿ ನಮ್ರತಾ, ಸಂಗೀತಾ ಹಾಗೂ ಪ್ರತಾಪ್ ಇದ್ದರು. ಎಲ್ಲರೂ ಕಾರ್ತಿಕ್ ಅವರು ನಮ್ರತಾಗೆ ವೋಟ್ ಮಾಡಬಹುದು ಎಂದು ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಅವರು ಅಚ್ಚರಿ ಎಂಬಂತೆ ಸಂಗೀತಾಗೆ ವೋಟ್​ ಮಾಡಿದರು. ಆ ಬಳಿಕ ನಮ್ರತಾ ಹಾಗೂ ಕಾರ್ತಿಕ್ ಕುಳಿತು ಚರ್ಚೆ ಮಾಡಿದ್ದರು. ‘ನನಗೆ ಹರ್ಟ್ ಮಾಡಿ ನನ್ನ ಬಳಿಯೇ ಬಂದು ಮಾತಾಡ್ತಾ ಇದೀಯಲ್ಲ’ ಎಂದು ಕಾರ್ತಿಕ್​ಗೆ ನಮ್ರತಾ ಹೇಳಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ವೀಕೆಂಡ್ ಎಪಿಸೋಡ್ ರಾತ್ರಿ 9ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ