AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಫಿನಾಲೆಗೆ ವಿನಯ್​ ಬರಬಾರದು’: ಸುದೀಪ್​ ಮುಂದೆ ಪೂರ್ತಿ ಅಸಮಾಧಾನ ಹೊರಹಾಕಿದ ಸಂಗೀತಾ

‘ವಿನಯ್​ ಅವರಿಂದ ಆಟ ಹಾಳಾಗಿದೆ. ಇಂಥ ವ್ಯಕ್ತಿತ್ವದವರನ್ನು ಬಿಗ್​ ಬಾಸ್​ ವಿನ್ನರ್​ ಆಗಿ ನೋಡಲು ನಾನು ಇಷ್ಟಪಡುವುದಿಲ್ಲ. ಫೈನಲಿಸ್ಟ್​ಗಳಲ್ಲಿ ಅವರು ಒಬ್ಬರಾಗಿ ಇರುವುದು ನನಗೆ ಇಷ್ಟ ಇಲ್ಲ’ ಎಂದು ಸಂಗೀತಾ ಶೃಂಗೇರಿ ಅವರು ನೇರವಾಗಿ ಹೇಳಿದ್ದಾರೆ. ಫಿನಾಲೆ ವಾರಕ್ಕೆ ಸಂಗೀತಾ ಈಗಾಗಲೇ ಟಿಕೆಟ್​ ಪಡೆದಿದ್ದಾರೆ.

‘ಫಿನಾಲೆಗೆ ವಿನಯ್​ ಬರಬಾರದು’: ಸುದೀಪ್​ ಮುಂದೆ ಪೂರ್ತಿ ಅಸಮಾಧಾನ ಹೊರಹಾಕಿದ ಸಂಗೀತಾ
ಸಂಗೀತಾ ಶೃಂಗೇರಿ, ವಿನಯ್​ ಗೌಡ
ಮದನ್​ ಕುಮಾರ್​
|

Updated on: Jan 14, 2024 | 8:39 AM

Share

ಬಿಗ್ ಬಾಸ್​ ಮನೆಯಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್​ ಗೌಡ (Vinay Gowda) ಅವರು ಹಲವು ಬಾರಿ ಜಗಳ ಮಾಡಿಕೊಂಡಿದ್ದಾರೆ. ನಡುವೆ ಒಂದಷ್ಟು ದಿನ ಸ್ನೇಹ ಬೆಳೆಸಿಕೊಂಡಿದ್ದ ಅವರು ನಂತರ ಮತ್ತೆ ಕಿತ್ತಾಡಲು ಆರಂಭಿಸಿದರು. ಈಗ ಫಿನಾಲೆ ವಾರ ಹತ್ತಿರ ಆಗಿದೆ. ಸಂಗೀತಾ ಶೃಂಗೇರಿ (Sangeetha Sringeri) ಅವರು ನೇರವಾಗಿ ಫಿನಾಲೆ ವಾರಕ್ಕೆ ಟಿಕೆಟ್​ ಪಡೆದಿದ್ದಾರೆ. ವೀಕೆಂಡ್​ ಪಂಚಾಯ್ತಿಯಲ್ಲಿ ಹೊಸ ವಿಚಾರ ಚರ್ಚೆಗೆ ಬಂದಿದೆ. ‘ಯಾವ ವ್ಯಕ್ತಿ ಫಿನಾಲೆ (Bigg Boss Finale) ತಲುವುದು ನಿಮಗೆ ಇಷ್ಟ ಇಲ್ಲ’ ಎಂದು ಕಿಚ್ಚ ಸುದೀಪ್​ ಎಲ್ಲರಿಗೂ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸಂಗೀತಾ ಶೃಂಗೇರಿ ಅವರು ವಿನಯ್​ ಗೌಡ ಹೆಸರು ಹೇಳಿದ್ದಾರೆ. ತಮ್ಮ ಈ ಅಭಿಪ್ರಾಯಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

‘ನನ್ನ ಪ್ರಕಾರ ಬಿಗ್​ ಬಾಸ್​ ಎಂಬುದು ಒಂದು ವ್ಯಕ್ತಿತ್ವದ ಸ್ಪರ್ಧೆ. ಖಂಡಿತವಾಗಿಯೂ ವಿನಯ್​ ಅವರು ಗೇಮ್​ನಲ್ಲಿ ತುಂಬ ಚೆನ್ನಾಗಿ ಆಡಿದ್ದಾರೆ. ಆದರೆ ಅವರು ತಮ್ಮ ಅಭಿಪ್ರಾಯವನ್ನು ಹೇರುತ್ತಾರೆ. ಇದನ್ನು ಮೋಸ ಅಥವಾ ಸ್ಮಾರ್ಟ್​ ಪ್ಲೇ ಅಂತ ಹೇಳಬಹುದು. ಹಲವು ಬಾರಿ ಅನೇಕರ ಮನಸ್ಸು ಬದಲಾಗಿದೆ. ನನಗೆ ಎಮೋಷನಲಿ ತುಂಬ ಪರಿಣಾಮ ಬೀರಿದೆ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.

ಇದನ್ನೂ ಓದಿ: ಅರ್ಹರಿಗೇ ಸಿಕ್ತು ಫೈನಲ್ ಟಿಕೆಟ್, ಫೈಟರ್ ಸಂಗೀತಾ ಫಿನಾಲೆಗೆ

‘ಬೇರೆ ಗೇಮ್ಸ್​ ಆಡುವಾಗ ವಿನಯ್​ ಅವರ ಅಗ್ರೆಷನ್​ ಕಾರಣದಿಂದ ಆಟ ಹಾಳಾಗಿದೆ. ಇಂಥ ವ್ಯಕ್ತಿತ್ವದವರನ್ನು ಬಿಗ್​ ಬಾಸ್​ ವಿನ್ನರ್​ ಆಗಿ ನೋಡಲು ನಾನು ಇಷ್ಟಪಡುವುದಿಲ್ಲ. ಫೈನಲಿಸ್ಟ್​ಗಳಲ್ಲಿ ಅವರು ಒಬ್ಬರಾಗಿ ಇರುವುದು ನನಗೆ ಇಷ್ಟ ಇಲ್ಲ’ ಎಂದು ಸಂಗೀತಾ ಶೃಂಗೇರಿ ಅವರು ನೇರವಾಗಿ ಹೇಳಿದ್ದಾರೆ. ಇನ್ನು, ‘ಡ್ರೋನ್​ ಪ್ರತಾಪ್​ ಅವರು ಒಂದು ವಾರ ಕಾದು ನೋಡಬೇಕು. ನಮ್ರತಾ ಗೌಡ ಅವರು ನೇರವಾಗಿ ಫಿನಾಲೆ ವಾರಕ್ಕೆ ಬರಬೇಕು’ ಎಂದು ಸಂಗೀತಾ ಹೇಳಿದ್ದಾರೆ.

ಇದನ್ನೂ ಓದಿ: ಸಂಗೀತಾಗೆ ಫಿನಾಲೆ ಟಿಕೆಟ್ ಜೊತೆ ಮತ್ತೊಂದು ದೊಡ್ಡ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್

‘ನಮ್ರತಾ ಗೌಡ ತುಂಬ ಸ್ಟ್ರಾಂಗ್ ಆಗಿದ್ದಾರೆ. ಮೊದಲಿನಿಂದ ನನಗೂ ನಮ್ರತಾಗೂ ಆಗಿಬರುತ್ತಿರಲಿಲ್ಲ. ಆದರೆ ಎಲ್ಲೇ ಇದ್ದರೂ ಅವರು ಪ್ರಾಮಾಣಿಕವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಅವರು ಫೈನಲಿಸ್ಟ್​ ಆಗಲು ಸಾಮರ್ಥ್ಯ ಹೊಂದಿದ್ದಾರೆ’ ಎಂದು ನಮ್ರತಾ ಪರವಾಗಿ ಸಂಗೀತಾ ಮಾತನಾಡಿದ್ದಾರೆ. ಅಂತಿಮವಾಗಿ ಯಾರು ಫಿನಾಲೆಗೆ ತಲುಪುತ್ತಾರೆ? ಟ್ರೋಫಿ ಯಾರಿಗೆ ಸಿಗಲಿದೆ? ರನ್ನರ್​ಅಪ್​ ಯಾರು ಆಗಲಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!
ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಇರಾಕ್​​ನಲ್ಲಿ ಯುಎಸ್ ವಾಯುಪಡೆಯ ಇಂಧನ ತುಂಬುವ ವಿಮಾನ ಪತನ
ಇರಾಕ್​​ನಲ್ಲಿ ಯುಎಸ್ ವಾಯುಪಡೆಯ ಇಂಧನ ತುಂಬುವ ವಿಮಾನ ಪತನ
ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು!
ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು!