ಸಂತು-ಪಂತು ಈ ವಾರ ಹೊರಗೆ ಹೋಗಿದ್ದು ಯಾರು? ಟ್ವಿಸ್ಟ್ ಕೊಟ್ಟರು ಸುದೀಪ್

Bigg Boss Elimination: ಬಿಗ್​ಬಾಸ್​ ಕನ್ನಡ ಸೀಸನ್ 10 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಈ ವಾರ ಎಲಿಮಿನೇಷನ್​ನಲ್ಲಿ ಸುದೀಪ್ ಸಖತ್ ಟ್ವಿಸ್ಟ್ ಕೊಟ್ಟಿದ್ದಾರೆ.

ಸಂತು-ಪಂತು ಈ ವಾರ ಹೊರಗೆ ಹೋಗಿದ್ದು ಯಾರು? ಟ್ವಿಸ್ಟ್ ಕೊಟ್ಟರು ಸುದೀಪ್
Follow us
ಮಂಜುನಾಥ ಸಿ.
|

Updated on: Jan 14, 2024 | 11:21 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10, 14ನೇ ವಾರಕ್ಕೆ ಬಂದಿದೆ. ಮನೆಯಲ್ಲಿ ಎಲ್ಲ ಗಟ್ಟಿ ಸ್ಪರ್ಧಿಗಳೇ ಉಳಿದಿದ್ದಾರೆ. ಈ ವಾರ ಯಾರು ಮನೆಗೆ ಹೋಗಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿತ್ತು. ವಿನಯ್, ನಮ್ರತಾ, ತನಿಷಾ, ತುಕಾಲಿ ಸಂತು, ಕಾರ್ತಿಕ್, ವರ್ತೂರು ಸಂತೋಷ್ ಅವರು ಈ ವಾರ ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್​ನಲ್ಲಿ ನಮ್ರತಾ ಸೇಫ್ ಆಗಿದ್ದರು. ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಸಖತ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ.

ಭಾನುವಾರದ ಎಪಿಸೋಡ್​ ಅನ್ನು ಎಂದಿನಂತೆ ನಗುತ್ತಾ, ನಗಿಸುತ್ತಾ ಆರಂಭಿಸಿದ ಸುದೀಪ್, ಮೊದಲಿಗೆ ಸೇಫ್ ಮಾಡಿದ್ದು ವಿನಯ್ ಅನ್ನು. ಅದಾದ ಬಳಿಕ ಕಾರ್ತಿಕ್ ಸೇಪ್ ಆದರು. ಅವರ ಬಳಿಕ ಸೇಫ್ ಆಗಿದ್ದು ತನಿಷಾ. ಕೊನೆಯದಾಗಿ ಉಳಿದಿದ್ದು ಬಿಗ್​ಬಾಸ್​ನ ‘ಸಂತು-ಪಂತು’ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್.

ಮನೆಯ ಆಪ್ತ ಗೆಳೆಯರಾದ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರುಗಳು ಎಲಿಮಿನೇಷನ್​ನ ಕೊನೆಯ ಸ್ಪರ್ಧಿಗಳಾಗಿ ಉಳಿದರು. ಈ ವೇಳೆ ಸುದೀಪ್ ಈ ಇಬ್ಬರೂ ಎಲಿಮಿನೇಷನ್ ನೆನೆದು ಶುಕ್ರವಾರ ರಾತ್ರಿ ಮಾತನಾಡಿದ್ದ ವಿಡಿಯೋ ಒಂದನ್ನು ಎಲ್ಲರೆದುರು ಪ್ಲೇ ಮಾಡಿದರು. ಅದರಲ್ಲಿ ವರ್ತೂರು ಸಂತೋಷ್ ಎಲಿಮಿನೇಷನ್ ನೆನೆದು ಭಾವುಕರಾಗಿದ್ದರು, ಅವರೊಟ್ಟಿಗೆ ತುಕಾಲಿ ಸಂತು ಸಹ ಭಾವುಕರಾಗಿದ್ದರು.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಕೊನೆಯ ಉತ್ತಮ ಯಾರು? ಕಳಪೆ ಯಾರು?

ಭಾನುವಾರದ ಎಪಿಸೋಡ್​ನಲ್ಲಿ ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರಲ್ಲಿ ಯಾರನ್ನು ಉಳಿಸಿಕೊಳ್ಳುತ್ತೀರಿ ಎಂದರೆ ತನಿಷಾ ಹಾಗೂ ಡ್ರೋನ್ ಪ್ರತಾಪ್ ಹೊರತಾಗಿ ಇನ್ನೆಲ್ಲರೂ ತುಕಾಲಿಯೇ ಉಳಿದುಕೊಳ್ಳಲಿ ಎಂದರು. ಆ ವೇಳೆಗಾಗಲೆ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಭಾವುಕರಾಗಿ ಕಣ್ಣೀರು ಹಾಕಲು ಆರಂಭಿಸಿದರು. ಆ ಭಾವುಕ ಸನ್ನಿವೇಶದಲ್ಲಿ ಸುದೀಪ್, ‘ಬಿಗ್​ಬಾಸ್​ನಲ್ಲಿ ನಾನು ನೋಡಿದ ಅತ್ಯಂತ ಆಪ್ತ ಗೆಳೆತನ ನಿಮ್ಮಿಬ್ಬರದ್ದು. ನಿಮ್ಮಲ್ಲಿ ಒಬ್ಬರು ಇಲ್ಲವೆಂದರೂ ಸಹ ಟೆರೆಸ್​ಗೆ ಆ ಬೀನ್​ ಬ್ಯಾಗ್​ಗೆ ಅರ್ಥವಿರುವುದಿಲ್ಲ. ನಿಮ್ಮಿಬ್ಬರ ಗೆಳೆತನ ಅಮಾಯಕತನದಿಂದ ಕೂಡಿದೆ. ಇಷ್ಟು ಒಳ್ಳೆಯ ಗೆಳೆತನ ಬಿಗ್​ಬಾಸ್ ಮನೆಯಲ್ಲಿ ನೋಡಲು ಸಿಕ್ಕಿದ್ದು ಬಹಳ ಕಡಿಮೆ’ ಎಂದರು.

ಇಬ್ಬರೂ ಭಾವುಕರಾಗಿದ್ದು ಕಂಡು, ತನಿಷಾ, ಡ್ರೋನ್ ಪ್ರತಾಪ್, ನಮ್ರತಾ, ಸಂಗೀತಾ ಅವರುಗಳು ಸಹ ಭಾವುಕರಾಗಿ ಕಣ್ಣೀರು ಹಾಕಿದರು. ಕೊನೆಗೆ ಸುದೀಪ್ ತಮ್ಮ ಎಂದಿನ ಶೈಲಿಯಲ್ಲಿ ಎಲ್ಲರಿಗೂ ಕುತೂಹಲ ಹೆಚ್ಚಾಗುವಂತೆ ನಿಧಾನಕ್ಕೆ ಮಾತನಾಡುತ್ತಾ, ಈ ವಾರ ಯಾರೂ ಸಹ ಮನೆಯಿಂದ ಹೊರಗೆ ಹೋಗುತ್ತಿಲ್ಲ ಎಂದರು. ಅಲ್ಲಿಗೆ ಇಬ್ಬರಿಗೂ ನೆಮ್ಮದಿಯಾಯ್ತು. ಇಬ್ಬರೂ ಪರಸ್ಪರ ತಬ್ಬಿಕೊಂಡರು, ತುಕಾಲಿ, ಸುದೀಪ್​ಗೆ ಧನ್ಯವಾದ ಹೇಳುತ್ತಾ, ಆಗಲೇ ನೀವು ಮಾತನಾಡುವಾಗ, ನಾನೇ ಎದ್ದು ಹೊರಗೆ ಹೋಗಿಬಿಡೋಣ ಅನ್ನಿಸಿಬಿಟ್ಟಿತ್ತು ಎಂದರು.

ಕೊನೆಗೆ ಮಾತನಾಡಿದ ಸುದೀಪ್, ‘ಈ ವಾರ ನೋ ಎಲಿಮಿನೇಷನ್ ವೀಕ್. ಈ ವಾರ ಯಾರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಅದು ಏಕೆಂದು ಮುಂದಿನ ವಾರದಲ್ಲಿ ಗೊತ್ತಾಗುತ್ತದೆ. ಈಗ ಸೇಫ್ ಆಗಿರುವವರು ಸಹ ಆರಾಮವಾಗಿ ಇರುವಂತಿಲ್ಲ. ಮುಂದಿನ ವಾರ ಕೊನೆಯ ವಾರದ ಪಂಚಾಯಿತಿ ಇರುತ್ತದೆ. ಅಷ್ಟರಲ್ಲಿ ಏನು ಬೇಕಾದರೂ ಆಗಬಹುದು’ ಎಂಬ ಟ್ವಿಸ್ಟ್ ಒಂದನ್ನು ಸಹ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?