‘ನನ್ನಿಂದ ತನಿಷಾನ ದೂರ ಮಾಡಿದ ಪಾಪಿ ಇವನು’: ಕಾರ್ತಿಕ್​ ಕಡೆ ಕೈ ತೋರಿಸಿದ ವರ್ತೂರು

Updated on: Jan 19, 2024 | 9:04 PM

ಕಾರ್ತಿಕ್​ ನಾಮಿನೇಟ್​ ಮಾಡಿದ್ದರಿಂದಲೇ ತನಿಷಾ ಕುಪ್ಪಂಡ ಎಲಿಮಿನೇಟ್​ ಆಗಬೇಕಾಯಿತು. ಹಾಗಾಗಿ ‘ನನ್ನಿಂದ ಬೆಂಕಿಯನ್ನು ದೂರ ಮಾಡಿದ ಪಾಪಿ ಇವನು’ ಎಂದು ಕಾರ್ತಿಕ್​ ಕಡೆಗೆ ವರ್ತೂರು ಸಂತೋಷ್​ ಕೈ ತೋರಿಸಿದ್ದಾರೆ. ‘ಜಾಸ್ತಿ ದಿನ ಏನೂ ಇಲ್ಲ. ಮತ್ತೆ ಹೋಗಿ ಸೇರಿಕೊಳ್ಳಬಹುದು ಬಿಡು’ ಎಂದು ತುಕಾಲಿ ಸಂತೋಷ್​ ಅವರು ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ತನಿಷಾ ಕುಪ್ಪಂಡ (Tanisha Kuppanda) ಅವರನ್ನು ಎಲ್ಲರೂ ಬೆಂಕಿ ಎಂದು ಕರೆಯುತ್ತಿದ್ದರು. ಕೊನೇ ಹಂತದಲ್ಲಿ ತನಿಷಾ ಅವರು ಬಿಗ್​ ಬಾಸ್ (Bigg Boss Kannada)​ ಆಟದಿಂದ ಎಲಿಮಿನೇಟ್​ ಆಗಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ದೊಡ್ಮನೆಯಲ್ಲಿ ಇರುವ ವರ್ತೂರು ಸಂತೋಷ್​ ಅವರಿಗೂ ಈ ಬಗ್ಗೆ ನೋವಾಗಿದೆ. ಇದೇ ವಿಚಾರ ಇಟ್ಟುಕೊಂಡು ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ (Varthur Santhosh), ತುಕಾಲಿ ಸಂತೋಷ್​ ಹಾಗೂ ಕಾರ್ತಿಕ್​ ಮಹೇಶ್​ ಚರ್ಚೆ ಮಾಡಿದ್ದಾರೆ. ಕಾರ್ತಿಕ್​ ನಾಮಿನೇಟ್​ ಮಾಡಿದ್ದರಿಂದಲೇ ತನಿಷಾ ಕುಪ್ಪಂಡ ಅವರು ಎಲಿಮಿನೇಟ್​ ಆಗಬೇಕಾಯಿತು. ಹಾಗಾಗಿ ‘ನನ್ನಿಂದ ಬೆಂಕಿಯನ್ನು ದೂರ ಮಾಡಿದ ಪಾಪಿ ಇವನು’ ಎಂದು ಕಾರ್ತಿಕ್​ ಕಡೆಗೆ ವರ್ತೂರು ಸಂತೋಷ್​ ಕೈ ತೋರಿಸಿದ್ದಾರೆ. ‘ಜಾಸ್ತಿ ದಿನ ಏನೂ ಇಲ್ಲ. ಮತ್ತೆ ಹೋಗಿ ಸೇರಿಕೊಳ್ಳಬಹುದು ಬಿಡು’ ಎಂದು ತುಕಾಲಿ ಸಂತೋಷ್​ ಅವರು ಹೇಳಿದ್ದಾರೆ. ‘ಕಲರ್ಸ್​ ಕನ್ನಡ’ದಲ್ಲಿ ಜನವರಿ 19ರಂದು ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಉಚಿತವಾಗಿ ಲೈವ್​ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More