‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
Bigg Boss: ರಾಕ್ಷಸರು-ಗಂಧರ್ವರ ಪಾತ್ರಗಳು ಬದಲಾಗಿವೆ, ನಿನ್ನೆ ರಾಕ್ಷಸರಾಗಿದ್ದವರು ಇಂದು ಗಂಧರ್ವರಾಗಿದ್ದಾರೆ. ಗಂಧರ್ವರಾಗಿದ್ದವರು ರಾಕ್ಷಸರಾಗಿದ್ದಾರೆ. ರಾಕ್ಷಸ ವಿನಯ್ ಅಬ್ಬರಕ್ಕೆ ಮನೆ ನಡುಗಿದೆ.
ಬಿಗ್ಬಾಸ್ನಲ್ಲಿ (Bigg Boss) ಈಗ ಅಸುರರು ದಾನವರ ನಡುವೆ ಹೋರಾಟ ನಡೆಯುತ್ತಿದೆ. ಗಂಧರ್ವರು, ರಾಕ್ಷಸರು ಎಂದು ಮನೆಯ ಸದಸ್ಯರನ್ನು ಎರಡು ಭಾಗಗಳಾಗಿ ವಿಂಗಡಿಸಿ ಟಾಸ್ಕ್ಗಳನ್ನು ಬಿಗ್ಬಾಸ್ ಆಡಿಸುತ್ತಿದ್ದಾರೆ. ಮಂಗಳವಾರದ ಎಪಿಸೋಡ್ನಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್ ಇತರರು ರಾಕ್ಷಸರಾಗಿ ಗಂಧರ್ವರಾಗಿದ್ದ ಮನೆಯ ಸದಸ್ಯರನ್ನು ಕಾಡಿಸಿದರು. ರಾಕ್ಷಸರ ಅಟ್ಟಹಾಸದಿಂದ ಕುದ್ದು ರಾಕ್ಷಸರಾಗಲು ಕಾಯುತ್ತಿದ್ದ ವಿನಯ್, ನಮ್ರತಾ ಅವರಿಗೆ ಬುಧವಾರದ ಎಪಿಸೋಡ್ನಲ್ಲಿ ಅವಕಾಶ ಸಿಕ್ಕಿದೆ. ರಾಕ್ಷಸ ವಿನಯ್ ಅಬ್ಬರಿಸಿದ್ದಾರೆ. ವಿನಯ್ ಮುಂದೆ ತಲೆ ತಗ್ಗಿಸಿ ಕ್ಷಮೆ ಕೇಳಿದ್ದಾರೆ ಕಾರ್ತಿಕ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ