ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿರೋದು ಆರೋಪವಲ್ಲ, ನನ್ನಲ್ಲಿ ಪುರಾವೆ ಇದೆ: ಬಸನಗೌಡ ಯತ್ನಾಳ್
ಹಿಂದಿನ ಬಿಜೆಪಿ ಸರ್ಕಾರದ ಲೋಪದೋಷ ಮತ್ತು ಅಸಾಮರ್ಥ್ಯವನ್ನು ಶಾಸಕ ಬಸನಗೌಡ ಪಾಟೀಲ್ ಟೀಕಿಸಿದರು. ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾದಾಗ ತಮ್ಮ ಸರ್ಕಾರ ಏನೂ ಮಾಡಲಿಲ್ಲ, ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಚ್ಚಿದಾಗ ಬಿಜೆಪಿ ಸರ್ಕಾರ ನಿಷ್ಕ್ರಿಯವಾಗಿತ್ತು, ಕೆಜೆ ಹಳ್ಳಿ, ಡಿಜಿ ಹಳ್ಳಿ ಪ್ರಕರಣದ ಬಗ್ಗೆ ಅಸಡ್ಡೆ ಭಾವ ತಳೆದಿತ್ತು, ಆಗಿನ ಸರ್ಕಾರ ವಿಫಲವಾಗಿದ್ದರಿಂದಲೇ ಬಿಜೆಪಿಗೆ 66 ಸ್ಥಾನ ಸಿಕ್ಕಿವೆ, ಚೆನ್ನಾಗಿ ಕೆಲಸ ಮಾಡಿದ್ದರೆ 130 ಸೀಟು ಸಿಗುತ್ತಿದ್ದವು ಎಂದು ಯತ್ನಾಳ್ ಹೇಳಿದರು.
ಬೆಳಗಾವಿ: ವಿಜಯಪುರದಲ್ಲಿರುವ ದರ್ಗಾಗಳಲ್ಲಿ ಭಯೋತ್ಪಾದಕ ಸಂಘಟನೆಗಳ (terror outfits) ಜೊತೆ ಇರುವ ಮೌಲ್ವಿಗಳಿದ್ದಾರೆ, ಐಸಿಸ್ (ISIS) ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಮುಸ್ಲಿಂ ಸಮಾವೇಶದಲ್ಲಿ ಪಾಲ್ಗೊಂಡಿದ್ದ, ವಿಜಯಪುರದಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿರುವ ಇವನು ದೇಶ ವಿರೋಧಿ ಚಟುವಟಿಕೆ ಮತ್ತು ಇಸ್ಲಾಂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾನೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಹೇಳಿದರು. ಸುವರ್ಣ ಸೌಧದ ಕಾರಿಡಾರ್ ನಲ್ಲಿ ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಯತ್ನಾಳ್, ತಮ್ಮದು ಹಿಟ್ ಅಂಡ್ ರನ್ ಪ್ರವೃತ್ತಿ ಅಲ್ಲ, ದಾಖಲೆ ಮತ್ತು ಪುರಾವೆಗಳನ್ನು ಇಟ್ಟಿಕೊಂಡೇ ಮಾತಾಡುತ್ತಿರುವುದಾಗಿ ಹೇಳಿದರು. ತನ್ನ ಮಾಹಿತಿಯ ಮೂಲಗಳನ್ನು ಬಹಿಂಗಗೊಳಿಸವುದಿಲ್ಲ ಎಂದ ಶಾಸಕರು ಸಿಬಿಐ, ಎನ್ ಐಎದಂಥ ತನಿಖಾ ಏಜೆನ್ಸಿಗಳಿಗೆ ಪ್ರಕರಣವನ್ನು ತನಿಖೆಗೆ ನೀಡಿದರೆ ಅಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ