ಎಲ್ಲಿಗೆ ಬಂತು ನೋಡಿ ಅವಿನಾಶ್ ಶೆಟ್ಟಿ ಪರಿಸ್ಥಿತಿ; ಮಾವುತ ಆಗಬೇಕಾದವರು ಹೀಗೆ ಆಗಿಬಿಟ್ರು
ಅವಿನಾಶ್ ಶೆಟ್ಟಿ ಅಂದುಕೊಂಡಿದ್ದೇ ಬೇರೆ, ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಆಗುತ್ತಿರುವುದೇ ಬೇರೆ. ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಅವರು ಈ ಆಟದಲ್ಲಿ ಅಂದುಕೊಂಡ ಮಟ್ಟಕ್ಕೆ ಅಬ್ಬರಿಸಲು ಸಾಧ್ಯವಾಗುತ್ತಿಲ್ಲ. ನಿರೀಕ್ಷೆಯ ಮಟ್ಟವನ್ನು ತಲುಪಲು ಅವರು ಬೇರೆಯದೇ ತಂತ್ರಗಾರಿಕೆ ಬಳಸಬೇಕಿದೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ ಅವಿನಾಶ್ ಶೆಟ್ಟಿ (Avinash Shetty) ಅವರು ಆರಂಭದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದರು. ಆನೆ ರೀತಿಯಲ್ಲಿ ವರ್ತಿಸುತ್ತಿರುವ ವಿನಯ್ ಗೌಡ ಅವರನ್ನು ಅವಿನಾಶ್ ಪಳಗಿಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಬಿಗ್ ಬಾಸ್ (Bigg Boss Kannada) ಆಟದಲ್ಲಿ ಅವಿನಾಶ್ ಶೆಟ್ಟಿ ವೀಕ್ ಎನಿಸುತ್ತಿದ್ದಾರೆ. ಆನೆಯನ್ನು ಪಳಗಿಸಲು ಅವರಿಗೆ ಸಾಧ್ಯವಾಗಿಲ್ಲ. ಇದೇ ವಿಚಾರವನ್ನು ಇಟ್ಟುಕೊಂಡ ಅವರನ್ನು ಅಣಕಿಸುವ ಪ್ರಯತ್ನವೂ ಬಿಗ್ ಬಾಸ್ ಮನೆಯೊಳಗೆ ನಡೆದಿದೆ. ಗಂಧರ್ವರು ವರ್ಸಸ್ ರಾಕ್ಷಸರು ಟಾಸ್ಕ್ನಲ್ಲಿ ವಿನಯ್ ಗೌಡ (Vinay Gowda) ಕೈಯಲ್ಲಿ ಅವಿನಾಶ್ ಶೆಟ್ಟಿ ಸಿಕ್ಕಿಕೊಂಡಿದ್ದಾರೆ. ಅವರು ಮೇಕೆಯಂತೆ ಓಡಾಡಿದ್ದಾರೆ. ‘ನನಗೆ ಯಾಕೋ ಕಾಮಿಡಿ ಪೀಸಿನಂತೆ ಕಾಣುತ್ತಿದ್ದೀಯ’ ಎಂದು ವರ್ತೂರು ಸಂತೋಷ್ ಹೇಳಿರುವುದು ಪ್ರೋಮೋನಲ್ಲಿ ಹೈಲೈಟ್ ಆಗಿದೆ. ಈ ಸಂಚಿಕೆ ಡಿ.7ರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದ್ದು, ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ದಿನದ 24 ಗಂಟೆಯೂ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.