ಪಲಾಯನವಾದವೇ ಮಂತ್ರವಾದರೆ ಆರೋಪ ಮಾಡೋದಾದ್ರೂ ಯಾಕೆ ಬಸನಗೌಡ ಪಾಟೀಲ್ ಯತ್ನಾಳರೇ?

ಪಲಾಯನವಾದವೇ ಮಂತ್ರವಾದರೆ ಆರೋಪ ಮಾಡೋದಾದ್ರೂ ಯಾಕೆ ಬಸನಗೌಡ ಪಾಟೀಲ್ ಯತ್ನಾಳರೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 07, 2023 | 1:32 PM

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್-ಇಬ್ಬರೂ ದೊಡ್ಡ ದೊಡ್ಡ ಆರೋಪ ಮಾಡುತ್ತಾರೆ, ಸಾಬೀತು ಮಾಡಿ ಅಂದಾಗ ಪಲಾಯನವಾದಕ್ಕೆ ಶರಣಾಗುತ್ತಾರೆ. ಕುಮಾರಸ್ವಾಮಿಯವರ ಇತ್ತೀಚಿನ ಪೆನ್ ಡ್ರೈವ್ ಪ್ರಕರಣ ಕನ್ನಡಿಗರ ಸ್ಮೃತಿಪಟಲದಲ್ಲಿ ಇನ್ನೂ ಹಸಿರಾಗಿದೆ. ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಪದೇಪದೆ ಆರೋಪ ಮಾಡುತ್ತಾರೆ ಯಾವುದನ್ನೂ ಸಾಬೀತು ಮಾಡಲ್ಲ.

ಬೆಳಗಾವಿ: ನಿನ್ನೆ ವೀರಾವೇಶದಿಂದ ಮಾತಾಡುತ್ತಾ ವಿಜಯಪುರದ ಮೌಲ್ವಿ ತನ್ವೀರ್ ಪೀರಾ (cleric Tanveer Peera) ಅವರಿಗೆ ಐಸಿಸ್ ಜೊತೆ ಸಂಪರ್ಕವಿದೆ ಆಗಾಗ ಮಧ್ಯಪ್ರಾಚ್ಯ ದೇಶಗಳಿಗೆ ಭೇಟಿ ನೀಡುತ್ತಾರೆ, ಅವರ ಖರ್ಚು ವೆಚ್ಚಗಳನ್ನೆಲ್ಲ ಭಯೋತ್ಪಾದಕ ಸಂಘಟನೆಗಳು ನೋಡಿಕೊಳ್ಳುತ್ತವೆ ಅಂತ ಆರೋಪ ಮಾಡಿ, ಇಂಥ ರಾಷ್ಟ್ರದ್ರೋಹಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವೇದಿಕೆ ಹಂಚಿಕೊಳ್ಳುತ್ತಾರೆ ಅಂತ ಹೇಳಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಇವತ್ತು ಮಾಧ್ಯಮಗಳಿಂದ ಹೇಗೆ ದೂರ ಓಡುತ್ತಿದ್ದಾರೆ ಅಂತ ನೋಡಿ! ನಿನ್ನೆ ಟಿವಿ9 ವರದಿಗಾರ ಯತ್ನಾಳ್ ಅವರಿಗೆ, ನಿಮ್ಮ ಆರೋಪಗಳು ಹಿಟ್ ಅಂಡ್ ರನ್ ರೀತಿಯಾಗಿರುತ್ತವೆ ಅಂತ ಹೇಳಿದಾಗ, ಹಿಟ್ಟೂ ಇಲ್ಲ ಪಿಟ್ಟೂ ಇಲ್ಲ ಎಲ್ಲ ಸಾಕ್ಷ್ಯಗಳನ್ನು ಇಟ್ಟುಕೊಂಡೇ ಹೇಳುತ್ತಿದ್ದೇನೆ ಎಂದಿದ್ದರು. ಅತ್ತ ವಿಜಯಪುರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೀರಾ ಆರೋಪ ಸಾಬೀತಾದರೆ ದೇಶ ತೊರೆಯುತ್ತೇನೆ, ಇಲ್ಲದಿದ್ದರೆ ಯತ್ನಾಳ್ ರಾಜಕಾರಣ ಬಿಡ್ತಾರೆಯೇ ಅಂತ ಕೇಳಿದ್ದಾರೆ. ಅದನ್ನೇ ಮಾಧ್ಯಮ ಪ್ರತಿನಿಧಿಗಳು ಯತ್ನಾಳ್ ಅವರಿಗೆ ಹೇಳಿದಾಗ ಅವರ ಪ್ರತಿಕ್ರಿಯೆ ಹೀಗಿತ್ತು. ಆಮೇಲೆ ಮಾತಾಡ್ತೀನಿ, ಮಧ್ಯಾಹ್ನ ಮಾತಾಡ್ತೀನಿ ಅಂತ ಧಾಪುಗಾಲಲ್ಲಿ ಸುವರ್ಣ ಸೌಧದೊಳಗೆ ನಡೆದು ಹೋಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ