ಪುಟ್ಟ ಮನೆಯಲ್ಲಿ ಸಾಧನೆಯ ಭಂಡಾರ: ಹೇಗಿದೆ ನೋಡಿ ಗಿಲ್ಲಿಯ ಸಣ್ಣ ಸೂರು

Edited By:

Updated on: Jan 19, 2026 | 12:27 PM

ಬಿಗ್​​ಬಾಸ್​ ಕನ್ನಡ 12 ವಿಜೇತ ಗಿಲ್ಲಿಗೆ ದಡದಪುರದಲ್ಲಿ ಅದ್ಧೂರಿ ಸ್ವಾಗತ ಸಿದ್ಧವಾಗಿದೆ. ಇಡೀ ಗ್ರಾಮವೇ ಸಂಭ್ರಮದಲ್ಲಿ ಮುಳುಗಿದೆ. ಬಡತನದ ಹಿನ್ನೆಲೆಯಿಂದ ಬಂದ ಗಿಲ್ಲಿ, ಯೂಟ್ಯೂಬ್ ಮೂಲಕ ಜನಪ್ರಿಯತೆ ಗಳಿಸಿ ಬೆಳ್ಳಿ ಪರದೆಗೂ ಕಾಲಿಟ್ಟಿದ್ದಾರೆ. ಅವರ ಮನೆಯಲ್ಲಿ ರಿಯಾಲಿಟಿ ಶೋಗಳ ಫೋಟೋಗಳು ಮತ್ತು ಪ್ರಶಸ್ತಿಗಳನ್ನು ತೋರಿಸಲಾಗಿದೆ.

ಬಿಗ್​​​ಬಾಸ್​​​​​ ಕನ್ನಡ 12 ವಿಜೇತ ಗಿಲ್ಲಿ ಅವರ ಯಶಸ್ಸನ್ನು ಅವರ ಹುಟ್ಟೂರು ದಡದಪುರ ಅದ್ಧೂರಿಯಾಗಿ ಆಚರಿಸುತ್ತಿದೆ. ದಡದಪುರದಲ್ಲಿರುವ ಗಿಲ್ಲಿ ಅವರ ಮನೆಯಲ್ಲಿ ಅವರನ್ನು ಭೇಟಿಯಾಗಲು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಗಿಲ್ಲಿ ತುಂಬಾ ಬಡತನದ ಮನೆಯಿಂದ ಬಂದವರು, ಹಲವಾರು ಶೋಗಳಲ್ಲಿ ಭಾಗವಹಿಸಿದ್ದಾರೆ. ಒಂದಿಷ್ಟು ಹಣವನ್ನು ಸಂಪಾದಿಸಿದ್ದಾರೆ. ಅದರೂ ಅವರು ಇಂದಿಗೂ ಪುಟ್ಟ ಮನೆಯಲ್ಲೇ ವಾಸವಾಗಿದ್ದಾರೆ. ಅವರ ಮನೆ ಹೇಗಿದೆ ಎಂಬುದನ್ನು ಟಿವಿ9 ಕನ್ನಡ ತೋರಿಸಿದೆ ನೋಡಿ. ಇದು ಗಿಲ್ಲಿ ಆಡಿ ಬೆಳೆದ ಪುಟ್ಟ ಮನೆ. ಬಡತನದ ಹಿನ್ನೆಲೆಯಿಂದ ಬಂದ ಗಿಲ್ಲಿ ಇಂದು  ಎತ್ತರಕ್ಕೆ ಬೆಳೆದಿರುವುದು ವಿಶೇಷ. ಅವರು ತಮ್ಮ ಪ್ರತಿಭೆಯಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ. ಗಿಲ್ಲಿ ಕೇವಲ ಬಡವರ ಮಗ ಮಾತ್ರವಲ್ಲ, ಅವರು ಅಸಾಧಾರಣ ಪ್ರತಿಭಾವಂತರು. ಅವರ ಈ ಪ್ರತಿಭೆಯೇ ಅವರ ಇಷ್ಟೊಂದು ದೊಡ್ಡ ಯಶಸ್ಸಿಗೆ ಕಾರಣವಾಯಿತು. ಮೊದಲು ಯೂಟ್ಯೂಬ್ ಮೂಲಕ ಜನಪ್ರಿಯತೆ ಗಳಿಸಿದ ಗಿಲ್ಲಿ, ನಂತರ ಬೆಳ್ಳಿ ಪರದೆಗೂ ಕಾಲಿಟ್ಟಿದ್ದಾರೆ. ಗಿಲ್ಲಿ ಅವರ ಮನೆಯಲ್ಲಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಫೋಟೋಗಳು, ನಟರೊಂದಿಗೆ ತೆಗೆಸಿಕೊಂಡ ಚಿತ್ರಗಳು, ಮತ್ತು ಅಭಿಮಾನಿಗಳು ಅವರಿಗೆ ನೀಡಿದ ಪ್ರಶಸ್ತಿಗಳು ಹಾಗೂ ಉಡುಗೊರೆಗಳನ್ನು ಇಟ್ಟಿದ್ದಾರೆ. ಇವೆಲ್ಲವೂ ಅವರ ಯಶಸ್ಸಿನ ಪಯಣಕ್ಕೆ ಸಾಕ್ಷಿಯಾಗಿವೆ. ಗ್ರಾಮಸ್ಥರು ಸಹ ಗಿಲ್ಲಿಯ ಈ ಸಾಧನೆಗೆ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ.

ಬಿಗ್​​ ಬಾಸ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Jan 19, 2026 12:27 PM