ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಸ್ವಾಮೀಜಿ ಹೈಡ್ರಾಮಾ: ಗ್ರಾಮಸ್ಥರಿಗೆ ಬೆದರಿ ಓಡಿದ ಸ್ವಯಂಘೋಷಿತ ಪವಾಡ ಪುರುಷ!
ಲಕ್ಕುಂಡಿಯ ಉತ್ಖನನ ಸ್ಥಳಕ್ಕೆ ಬಂದ ಸ್ವಾಮೀಜಿಯೊಬ್ಬರು ಹೈಡ್ರಾಮಾ ನಡೆಸಿದ್ದಾರೆ. ತಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಾಮುಂಡಿ ಮೂರ್ತಿ ಇದೆ ಎಂದು ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಹೇಳಿದ್ದಾರೆ. ಆರಂಭದಲ್ಲಿ ಎಲ್ಲವನ್ನೂ ತೀವ್ರ ಕುತೂಹಲದಲ್ಲಿ ವೀಕ್ಷಿಸಿದ ಗ್ರಾಮಸ್ಥರು ಬಳಿಕ ಸ್ವಯಂಘೋಷಿತ ಪವಾಡ ಪುರುಷನನ್ನು ಬೆನ್ನಟ್ಟಿ ಓಡಿಸಿದ್ದಾರೆ.
ಗದಗ, ಜನವರಿ 19: ಲಕ್ಕುಂಡಿಯಲ್ಲಿ ಇಂದು ನಾಲ್ಕನೇ ದಿನದ ಉತ್ಖನನ ನಡೆಯುತ್ತಿದ್ದು, ಗ್ರಾಮಕ್ಕೆ ಬಂದ ಸ್ವಾಮೀಜಿಯೊಬ್ಬರು ಫುಲ್ ಹೈಡ್ರಾಮಾ ನಡೆಸಿದ ಪ್ರಸಂಗ ನಡೆದಿದೆ. ತಾರಾಣಿಚೆನ್ನಮ್ಮ ವಂಶಸ್ಥ ಎಂದು ಪರಿಚಯಿಸಿಕೊಂಡಿರುವ ಎಸ್. ಸಿ. ಹಿರೇಮಠ ಹೆಸರಿನ ಸ್ವಾಮೀಜಿ, ತಾನೊಬ್ಬ ಪವಾಡ ಪುರುಷ. ತಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಾಮುಂಡಿ ಮೂರ್ತಿ ಇದೆ ಎಂದು ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಡ್ರಾಮಾ ಮಾಡಿದ್ದಾರೆ. ಆರಂಭದಲ್ಲಿ ಎಲ್ಲವನ್ನೂ ತೀವ್ರ ಕುತೂಹಲದಲ್ಲಿ ವೀಕ್ಷಿಸಿದ ಗ್ರಾಮಸ್ಥರು ಬಳಿಕ ಸ್ವಯಂಘೋಷಿತ ಪವಾಡ ಪುರುಷನನ್ನು ಬೆನ್ನಟ್ಟಿ ಓಡಿಸಿದ್ದಾರೆ. ಲಕ್ಕುಂಡಿ ಹಾಗೂ ಚಾಮುಂಡಿ ಇತಿಹಾಸಕ್ಕೂ ಸಂಬಂಧವಿಲ್ಲ. ನಮ್ಮೂರಿಗೆ ಬಂದು ಸುಳ್ಳು ಹೇಳ್ತಿಯಾ ಎಂದು ತರಾಟೆಗೆ ಪಡೆದಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಸ್ವಾಮೀಜಿ ಹಿಂಗಾಲಿನಲ್ಲಿ ಓಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
