‘ನಾನು ಏನೇ ಹೇಳಿದ್ರೂ ಅದು ಮಂಜುಗೆ ಕನೆಕ್ಟ್​ ಆಗ್ತಿತ್ತು’; ಬಿಗ್​ ಬಾಸ್​ ವಿನ್ನರ್​ ಬಗ್ಗೆ ದಿವ್ಯಾ ಸುರೇಶ್​ ಮಾತು

Edited By:

Updated on: Aug 10, 2021 | 4:49 PM

ಬಿಗ್​ ಬಾಸ್​ ಶೋನಿಂದ ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ಬೆಸ್ಟ್​ ಫ್ರೆಂಡ್ಸ್​ ಆದರು. ದೊಡ್ಮನೆಯಲ್ಲಿ ಅವರಿಬ್ಬರು ಹೆಚ್ಚು ಜೊತೆಯಾಗಿ ಕಾಲ ಕಳೆಯುತ್ತಿದ್ದರು. ಆ ಜರ್ನಿ ಬಗ್ಗೆ ದಿವ್ಯಾ ಸುರೇಶ್​ ಮಾತನಾಡಿದ್ದಾರೆ.

ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ ಬಗ್ಗೆ ದಿವ್ಯಾ ಸುರೇಶ್​ ಅವರಿಗೆ ವಿಶೇಷ ಭಾವನೆ ಇದೆ. ಇಬ್ಬರೂ ಕೂಡ ದೊಡ್ಮನೆಯಲ್ಲಿ ತುಂಬ ಆತ್ಮೀಯವಾಗಿದ್ದರು. ‘ಅನೇಕ ವಿಚಾರಗಳಲ್ಲಿ ಮಂಜು ನನಗೆ ಸ್ಫೂರ್ತಿ ಆಗುತ್ತಾರೆ. ಅವರು ಜೀವನದಲ್ಲಿ ಬೆಳೆದು ಬಂದ ರೀತಿ, ಈಗ ತಲುಪಿರುವ ಮಟ್ಟ ನೋಡಿದರೆ ಖುಷಿ ಆಗುತ್ತದೆ. ನಿಮಗೆ ಸ್ಫೂರ್ತಿ ಯಾರು ಅಂತ ಕೇಳಿದ್ರೇ ನಮ್ಮ ಅಮ್ಮನೇ ನನಗೆ ಸ್ಫೂರ್ತಿ ಎಂದು ಹೇಳುತ್ತಿದ್ದೆ. ಆದರೆ ಈಗ ಅವರ ಜೊತೆಯಲ್ಲಿ ಮಂಜು ಕೂಡ ನನಗೆ ಸ್ಫೂರ್ತಿ ಎಂದು ಹೇಳಲು ಹೆಮ್ಮೆ ಆಗುತ್ತದೆ’ ಎಂದು ದಿವ್ಯಾ ಸುರೇಶ್​ ಹೇಳಿದ್ದಾರೆ.

‘ಜೀವನದಲ್ಲಿ ಮಂಜು ತುಂಬ ಕಷ್ಟಗಳನ್ನು ನೋಡಿಕೊಂಡು ಬಂದಿದ್ದಾರೆ. ನಾನು ಕೂಡ ಜೀವನ ಏನು ಎಂಬುದನ್ನು ನೋಡಿದ್ದೇನೆ. ಮಂಜು ನನಗೆ ಏನಾದರೂ ಹೇಳಿದಾಗ ನಾನು ಕೂಡ ಜೀವನದಲ್ಲಿ ಆ ಹಂತವನ್ನು ದಾಟಿದ್ದರೆ ಮಾತ್ರ ಅದು ನನಗೆ ಅರ್ಥ​ ಆಗುತ್ತದೆ. ಹಾಗಾಗಿ ನಾನು ಏನೇ ಹೇಳಿದ್ರೂ ಅದು ಮಂಜುಗೆ ಬೇಗ ಕನೆಕ್ಟ್​ ಆಗುತ್ತಿತ್ತು. ನನ್ನ ಭಾವನೆಗಳಿಗೆ ಸ್ಪಂದಿಸುತ್ತಿದ್ದರು’ ಎಂದು ದಿವ್ಯಾ ಹೇಳಿದ್ದಾರೆ.

ಇದನ್ನೂ ಓದಿ:

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​

Manju Pavagada: ‘ಇವರು ಒಂದು ಕೈ ಮೇಲೆ’; ಬಿಗ್​ ಬಾಸ್​ ಗೆದ್ದ ಬಳಿಕ ದಿವ್ಯಾ​ ಬಗ್ಗೆ ಮಂಜು ಪಾವಗಡ ಮೊದಲ ಮಾತು

Loading...
Unable to load recommendations.
Follow Us
TV9 Web

TV9 Kannada

Read More