ಬಿಗ್ ಬಾಸ್ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ? ಕಣ್ಣೀರಿಟ್ಟ ಸ್ಪರ್ಧಿ
ಬಿಗ್ ಬಾಸ್ ಮನೆಯಲ್ಲಿ ಮೋಸದ ಆಟ ನಡೆದಿದೆ ಎಂದು ಹೇಳಲಾಗಿತ್ತು. ಧನರಾಜ್ ಅವರು ಆಟದ ಮಧ್ಯೆ ಮಾಡಿದ ಗಿಮಿಕ್ ಎಲ್ಲರಿಗೂ ಕಾಣಿಸಿತ್ತು. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಈಗ ಅವರನ್ನು ಹೊರಕ್ಕೆ ಕಳುಹಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಆ ಬಗ್ಗೆ ಇಲ್ಲಿದೆ ವಿವರ.
ಧನರಾಜ್ ಅವರು ಟಾಸ್ಕ್ನ ಮೋಸದಿಂದ ಗೆದ್ದ ಆರೋಪ ಇದೆ. ಕನ್ನಡಿಯಲ್ಲಿ ನೋಡಿ ಆಡಿದ್ದರಿಂದ ಆಟ ಅವರಿಗೆ ಸುಲಭ ಆಯಿತು. ಹೀಗಾಗಿ, ಗೆಲುವು ಅವರದ್ದಾಯಿತು. ಆದರೆ, ಈ ಆಟವನ್ನು ಬಿಗ್ ಬಾಸ್ ರದ್ದು ಮಾಡಿರಲಿಲ್ಲ. ಧನರಾಜ್ ಮಿಡ್ ವೀಕ್ ಎಲಿಮಿನೇಷ್ನಿಂದ ಬವಾಚ್ ಆಗಲು ಈ ಗೆಲುವು ಸಾಕಷ್ಟು ಪ್ರಾಮುಖ್ಯತೆ ವಹಿಸಿತ್ತು. ಆದರೆ, ಈಗ ಈ ಗೆಲವು ಅವರಿಗೆ ಮುಳುವಾಗಿದೆ. ಜನವರಿ 15ರ ಎಪಿಸೋಡ್ನಲ್ಲಿ ಯಾವುದೇ ಎಲಿಮಿನೇಷನ್ ನಡೆಸಿರಲಿಲ್ಲ. ಇದಕ್ಕೆ ಕಾರಣ ಆಗಿದ್ದು ಧನರಾಜ್ ಮೋಸದಾಟ ಎಂದು ಬಿಗ್ ಬಾಸ್ ಹೇಳಿದ್ದಾರೆ. ‘ತಮ್ಮನ್ನು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳುವಂತೆ’ ಧನರಾಜ್ ಕೋರಿದ್ದಾರೆ. ಅವರಿಗೆ ಎಲಿಮಿನೇಷನ್ ಶಿಕ್ಷೆ ಸಿಕ್ಕಿತೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 16, 2025 07:51 AM