ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ, ನಿದ್ರೆ ಬರಲ್ಲ: ವಿನ್ನರ್ ನಿಖಿಲ್ ಅನುಭವ

Edited By:

Updated on: Jan 23, 2025 | 8:40 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಫಿನಾಲೆ ಜನವರಿ 25 ಮತ್ತು 26ರಂದು ನಡೆಯಲಿದೆ. ಈ ಬಾರಿ ಯಾರು ವಿನ್ ಆಗ್ತಾರೆ ಎಂಬ ಕೌತುಕ ಹೆಚ್ಚಾಗಿದೆ. ‘ಬಿಗ್ ಬಾಸ್ ತೆಲುಗು 8’ ವಿನ್ನರ್ ಆದ ಕನ್ನಡಿಗ ನಿಖಿಲ್ ಅವರು ಈಗ ತಮ್ಮ ಅನುಭವವನ್ನು ಟಿವಿ 9 ಜೊತೆ ಹಂಚಿಕೊಂಡಿದ್ದಾರೆ. ಫಿನಾಲೆ ವಾರದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಕನ್ನಡಿಗ ನಿಖಿಲ್ ಅವರು ‘ಬಿಗ್ ಬಾಸ್ ತೆಲುಗು ಸೀಸನ್​ 8’ರ ವಿನ್ನರ್ ಆಗಿದ್ದರು. ಅವರೀಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಬಗ್ಗೆ ಮಾತನಾಡಿದ್ದಾರೆ. ‘ಎಲ್ಲ ಫೈನಲಿಸ್ಟ್​ಗಳಿಗೆ ಅಭಿನಂದನೆ. ಈ ವಾರ ಹೇಗೆ ಅನಿಸುತ್ತದೆ ಎಂಬುದು ಅನುಭವಿಸಿದವರಿಗೇ ಗೊತ್ತು. ನಾನು ಫಿನಾಲೆಯಲ್ಲಿ ಇದ್ದಾಗ ಹಾಗೆ ಆಗಿತ್ತು. ಎಲ್ಲರೂ ಚಿಂತೆಯಲ್ಲಿ ಇರುತ್ತಾರೆ. ಸರಿಯಾಗಿ ಊಟ ಸೇರಲ್ಲ, ನಿದ್ರೆ ಬರಲ್ಲ’ ಎಂದು ನಿಖಿಲ್ ಹೇಳಿದ್ದಾರೆ. ಭವ್ಯಾ ಗೌಡ, ಹನುಮಂತ, ಮೋಕ್ಷಿತಾ ಪೈ, ರಜತ್, ಉಗ್ರಂ ಮಂಜು, ತ್ರಿವಿಕ್ರಮ್ ಅವರು ಫಿನಾಲೆ ತಲುಪಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More