ಮತಯಂತ್ರಗಳಲ್ಲಿ ಬಿಹಾರದ ಭವಿಷ್ಯ ಸುಭದ್ರ: ಮತದಾನೋತ್ತರ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ?
ದೇಶದ ಕುತೂಹಲ ಕೆರಳಿಸಿರುವ ಬಿಹಾರದ 122 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಎರಡು ಹಂತದ ಮತದಾನ ಅಂತ್ಯವಾಗಿದೆ. ನವೆಂಬರ್ 6ರಂದು ಮೊದಲ ಹಂತದ ಮತದಾನ ನಡೆದಿದ್ದು, 64ಪರ್ಸೆಂಟ್ ವೋಟಿಂಗ್ ದಾಖಲಾಗಿದೆ. ಇಂದು (ನವೆಂಬರ್ 11) 2ನೇ ಹಂತದ ಮತಹಬ್ಬ ಮುಗಿದಿದ್ದು, ಶೇ.70ರಷ್ಟು ಮತದಾನವಾಗಿದೆ. ಎನ್‌ಡಿಎ ವರ್ಸಸ್ ಮಹಾಘಟಬಂಧನ ಕುರುಕ್ಷೇತ್ರದಲ್ಲಿ ಯಾರಿಗೆ ಬಿಹಾರ ಎಂಬುದು ನವೆಂಬರ್ 14ರಂದು ಗೊತ್ತಾಗಲಿದೆ. ಬಿಹಾರದ ಗದ್ದುಗೆ ಹಿಡಿಯಲು ಮ್ಯಾಜಿಕ್ ನಂಬರ್ 122 ಬೇಕಿದೆ. ಸದ್ಯ ಮತದಾರರು ಹೇಳಿರುವ ಬಿಹಾರ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.
ನವದೆಹಲಿ, (ನವೆಂಬರ್ 11): ದೇಶದ ಕುತೂಹಲ ಕೆರಳಿಸಿರುವ ಬಿಹಾರದ 122 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಎರಡು ಹಂತದ ಮತದಾನ ಅಂತ್ಯವಾಗಿದೆ. ನವೆಂಬರ್ 6ರಂದು ಮೊದಲ ಹಂತದ ಮತದಾನ ನಡೆದಿದ್ದು, 64ಪರ್ಸೆಂಟ್ ವೋಟಿಂಗ್ ದಾಖಲಾಗಿದೆ. ಇಂದು (ನವೆಂಬರ್ 11) 2ನೇ ಹಂತದ ಮತಹಬ್ಬ ಮುಗಿದಿದ್ದು, ಶೇ.70ರಷ್ಟು ಮತದಾನವಾಗಿದೆ. ಎನ್‌ಡಿಎ ವರ್ಸಸ್ ಮಹಾಘಟಬಂಧನ ಕುರುಕ್ಷೇತ್ರದಲ್ಲಿ ಯಾರಿಗೆ ಬಿಹಾರ ಎಂಬುದು ನವೆಂಬರ್ 14ರಂದು ಗೊತ್ತಾಗಲಿದೆ. ಬಿಹಾರದ ಗದ್ದುಗೆ ಹಿಡಿಯಲು ಮ್ಯಾಜಿಕ್ ನಂಬರ್ 122 ಬೇಕಿದೆ. ಸದ್ಯ ಮತದಾರರು ಹೇಳಿರುವ ಬಿಹಾರ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.
ಈ ಬಾರಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಸಾರಥಿಯ ಮಹಾಘಟ ಬಂಧನ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೇಲುಗೈ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಹಾಗಾದ್ರೆ ಮತದಾನ ಮುಗಿದ ಬೆನ್ನಲ್ಲೇ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ನುಡಿದಿರುವ ಭವಿಷ್ಯ ಏನೇಳ್ತಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
