AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನತ್ಸಂಗ್ಚು- II ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ- ಭೂತಾನ್ ರಾಜ

ಪುನತ್ಸಂಗ್ಚು- II ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ- ಭೂತಾನ್ ರಾಜ

ಸುಷ್ಮಾ ಚಕ್ರೆ
|

Updated on: Nov 11, 2025 | 9:07 PM

Share

ಪ್ರಧಾನಿ ನರೇಂದ್ರ ಮೋದಿ ಭೂತಾನ್ ಪ್ರವಾಸದಲ್ಲಿದ್ದಾರೆ. ಇಂದು ಭೂತಾನ್ ತಲುಪಿದ ಮೋದಿ ಭೂತಾನ್​ನ ರಾಜನನ್ನು ಭೇಟಿಯಾಗಿ ಅವರು 70ನೇ ಹುಟ್ಟುಹಬ್ಬದಲ್ಲಿ ಭಾಗವಹಿಸಿದರು. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ರಾಜ ಡ್ರೂಕ್ ಗಯಾಲ್ಪೊ ಅವರು ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಿದರು. ಪುನತ್ಸಂಗ್ಚು-II ಯೋಜನೆಯೊಂದಿಗೆ ಭಾರತ-ಭೂತಾನ್ ಇಂಧನ ಸಂಬಂಧಗಳು ಬಲಗೊಂಡಿವೆ.

ಭೂತಾನ್, ನವೆಂಬರ್ 11: ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭೂತಾನ್ ರಾಜ ಡ್ರೂಕ್ ಗಯಾಲ್ಪೊ ಅವರೊಂದಿಗೆ ಇಂದು ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಿದರು. ಇದು ಭಾರತ ಮತ್ತು ಭೂತಾನ್ ನಡುವಿನ ಯಶಸ್ವಿ ಇಂಧನ ಪಾಲುದಾರಿಕೆಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.

ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಭಾರತ ಮತ್ತು ಭೂತಾನ್ ಎರಡೂ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. 1,020-ಮೆಗಾವ್ಯಾಟ್​ನ ಈ ವಿದ್ಯುತ್ ಯೋಜನೆ ಎರಡೂ ದೇಶಗಳ ಇಂಧನ ಪಾಲುದಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂತಾನದ ರಾಜ ಮತ್ತು ರಾಣಿ ಭೂತಾನ್‌ನ ಥಿಂಪುವಿನ ವಾಂಗ್ ಚು ನದಿಯ ಪಶ್ಚಿಮ ದಂಡೆಯಲ್ಲಿರುವ ಐತಿಹಾಸಿಕ ಕೋಟೆ ಮತ್ತು ಬೌದ್ಧ ಮಠವಾದ ತಾಶಿಚೋ ಡ್ಜಾಂಗ್‌ನಲ್ಲಿ ಬರಮಾಡಿಕೊಂಡರು. ಈ ವೇಳೆ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು. ಹಾಗೇ, ಭೂತಾನ್ ರಾಜ ಮತ್ತು ರಾಣಿಯೊಂದಿಗೆ ಬೆಣ್ಣೆಯ ದೀಪವನ್ನು ಬೆಳಗಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ