ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ. ಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ಮನೆಗಳನ್ನು ತೊರೆದು ಪ್ರವಾಹ ಸಂತ್ರಸ್ತರು ಎತ್ತರದ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದುವರೆಗೂ ಆಡಳಿತದಿಂದ ಯಾವುದೇ ನೆರವು ಸಿಕ್ಕಿಲ್ಲ ಎನ್ನುತ್ತಾರೆ ಪ್ರವಾಹ ಸಂತ್ರಸ್ತರು.
ಪಾಟ್ನಾ: ಬಿಹಾರದಲ್ಲಿ ಗಂಗಾ ಮತ್ತು ಬುಧಿಗಂಡಕ್ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಖಗಾರಿಯಾದಲ್ಲಿ ಪ್ರವಾಹ ಭೀಕರ ಸ್ವರೂಪ ಪಡೆದುಕೊಂಡಿದೆ. ಜಿಲ್ಲೆಯ ಮೂರು ಬ್ಲಾಕ್‌ಗಳಾದ ಪರ್ಬಟ್ಟಾ, ಗೋಗ್ರಿ ಮತ್ತು ಖಗರಿಯಾ ಸದರ್‌ನ ನೂರಾರು ಹಳ್ಳಿಗಳಿಗೆ ಪ್ರವಾಹ ನೀರು ನುಗ್ಗಿದೆ. ಮನೆಗಳನ್ನು ತೊರೆದು ಪ್ರವಾಹ ಸಂತ್ರಸ್ತರು ಎತ್ತರದ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಗಂಗಾ ನದಿ ಅಪಾಯದ ಮಟ್ಟಕ್ಕಿಂತ 220 ಸೆಂಟಿಮೀಟರ್‌ಗಳಷ್ಟು ಮೇಲಕ್ಕೆ ಹರಿಯುತ್ತಿದ್ದು, ಮೋಹನ್‌ಪುರ, ಮೊಹಿಯುದ್ದೀನ್ ನಗರ ಮತ್ತು ವಿದ್ಯಾಪತಿ ನಗರ ಬ್ಲಾಕ್‌ಗಳ ಹತ್ತಾರು ಪಂಚಾಯತ್‌ಗಳ ಮೇಲೆ ಪರಿಣಾಮ ಬೀರಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ