ಕಾರಿನಿಂದ ಗುದ್ದಿ ಕೊಲ್ಲಲು ಯತ್ನ: ಬಚಾವಾದ ಬಗ್ಗೆ ಮುರಳಿ ಪ್ರಸಾದ್ ಮಾತು

Edited By:

Updated on: Mar 14, 2025 | 10:55 PM

ಮಂಗಳೂರಿನಲ್ಲಿ ಎದೆಝಲ್ ಎನ್ನಿಸೋ ಅಪಘಾತ ಸಂಭವಿಸಿದ್ದು, ಆ ಸಿಸಿಟಿವಿ ದೃಶ್ಯ ನೋಡಿ ಎಲ್ಲರೂ ಶಾಕ್ ಆಗಿದ್ರು. ಅದೇ ಅಪಘಾತ ಹಿಂದಿನ ರಹಸ್ಯ ಬಯಲಾಗಿದೆ. ಅಪಘಾತದ ಹಿಂದೆ ಅದೊಬ್ಬನ ಸಂಚು ಇತ್ತು ಎನ್ನುವುದು ಬಯಲಾಗಿದೆ. ವಿಪರ್ಯಾಸ ಅಂದ್ರೆ ಸಂಚಿಗೆ ಬಲಿಪಶು ಆಗಿದ್ದು ಮಾತ್ರ ಅಮಾಯಕ ಮಹಿಳೆ.

ಮಂಗಳೂರು, (ಮಾರ್ಚ್​ 14): ಮಂಗಳೂರಿನಲ್ಲಿ ಎದೆಝಲ್ ಎನ್ನಿಸೋ ಅಪಘಾತ ಸಂಭವಿಸಿದ್ದು, ಆ ಸಿಸಿಟಿವಿ ದೃಶ್ಯ ನೋಡಿ ಎಲ್ಲರೂ ಶಾಕ್ ಆಗಿದ್ರು. ಅದೇ ಅಪಘಾತ ಹಿಂದಿನ ರಹಸ್ಯ ಬಯಲಾಗಿದೆ. ಅಪಘಾತದ ಹಿಂದೆ ಅದೊಬ್ಬನ ಸಂಚು ಇತ್ತು ಎನ್ನುವುದು ಬಯಲಾಗಿದೆ. ವಿಪರ್ಯಾಸ ಅಂದ್ರೆ ಸಂಚಿಗೆ ಬಲಿಪಶು ಆಗಿದ್ದು ಮಾತ್ರ ಅಮಾಯಕ ಮಹಿಳೆ. ಹೌದು….ಬಿಎಸ್‌ಎನ್‌ಎಲ್‌ನ ನಿವೃತ ನೌಕರ ಆಗಿರೋ 70 ವರ್ಷದ ಸತೀಶ್‌ ಕುಮಾರ್‌, ಇದೇ ರಸ್ತೆಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ರೆ, ಮುರಳಿ ಪ್ರಸಾದ್ ಅವರ ಮನೆ ಕೂಡಾ ಇಲ್ಲೇ ಇದೆ. ಇವರಿಬ್ಬರ ಮನೆ ಮಧ್ಯೆ ಇರೋ ರಸ್ತೆ ವಿಚಾರವಾಗಿ ಕಳೆದ 6 ವರ್ಷಗಳಿಂದ ಗಲಾಟೆ ಆಗ್ತಿತ್ತು. ನಿತ್ಯವೂ ಸತೀಶ್‌ ಕುಮಾರ್‌ ಕಿರಿಕ್‌ ಮಾಡ್ತಿದ್ರಂತೆ. ಈ ಜಗಳ ಕೊಲೆ ವರೆಗೂ ಹೋಗಿದ್ದು, ನಿನ್ನೆ ಬೆಳಗ್ಗೆ ಮುರಳಿ ಪ್ರಸಾದ್‌ ಬೈಕ್‌ನಲ್ಲಿ ಕೆಲಸಕ್ಕೆ ಹೊರಟಿದ್ರು. ಅದನ್ನೇ ಕಾಯುತ್ತಿದ್ದ ಸತೀಶ್‌, ತನ್ನ ಕಾರ್‌ನ್ನ ಶರವೇಗದಲ್ಲಿ ನುಗ್ಗಿಸಿ ಸತೀಶ್‌ಗೆ ಡಿಕ್ಕಿಯೊಡೆಸಿದ್ದ. ಈ ವೇಳೆ ಮನೆಗೆಲಸಕ್ಕೆ ಅಂತಾ ಹೊರಟಿದ್ದ ಯಲ್ಲವ್ವ ಅನ್ನೋ ಮಹಿಳೆ ಅಪಘಾತಕ್ಕೆ ಸಿಲುಕಿದ್ದಾಳೆ. ಮುರಳಿಗೆ ಸಣ್ಣಪುಟ್ಟ ಗಾಯ ಆಗಿದ್ರೆ, ಅಮಾಯಕ ಯಲ್ಲವ್ವ ಆಸ್ಪತ್ರೆಯಲ್ಲಿ ನರಳಾಡ್ತಿದ್ದಾಳೆ. ಇನ್ನು ಸತೀಶ್​ ಕ್ರೌರ್ಯದಿಂದ ಬಚಾವ್ ಆದ ಮುರುಳಿ ಪ್ರಸಾದ್​ ನಿಟ್ಟುಸಿರುಬಿಟ್ಟಿದ್ದಾರೆ.

ಇದನ್ನೂ ನೋಡಿ: ಕಾರು ಗುದ್ದಿದ ರಭಸಕ್ಕೆ ಕಾಂಪೌಂಡ್​ ಮೇಲೆ ನೇತಾಡಿದ ಮಹಿಳೆ: ಎದೆ ಝಲ್​ ಎನಿಸುವ ದೃಶ್ಯ