ಎನ್​ಹೆಚ್​ಎಐ ಆದೇಶ ಕಾಗದದ ಮೇಲೆ ನಮ್ಮ ವಾಹನಗಳು ಮೈಸೂರು-ಬೆಂಗಳೂರು ಎಕ್ಸ್​​ಪ್ರೆಸ್​​​​ವೇ ಮೇಲೆ ಅಂತಿದ್ದಾರೆ ಬೈಕ್ ಸವಾರರು!

ಎನ್​ಹೆಚ್​ಎಐ ಆದೇಶ ಕಾಗದದ ಮೇಲೆ ನಮ್ಮ ವಾಹನಗಳು ಮೈಸೂರು-ಬೆಂಗಳೂರು ಎಕ್ಸ್​​ಪ್ರೆಸ್​​​​ವೇ ಮೇಲೆ ಅಂತಿದ್ದಾರೆ ಬೈಕ್ ಸವಾರರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 01, 2023 | 11:31 AM

ಬೈಕ್ ಸವಾರರನ್ನು ತಡೆಯುವ ಪ್ರಯತ್ನ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಡದಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಹಾಗಿದ್ದಲ್ಲಿ ಆದೇಶ ವನ್ನು ಹೊರಡಿಸುವ ಜರೂರತ್ತಾದರೂ ಏನಿತ್ತು?

ಮೈಸೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ (Bengaluru-Mysuru Expressway) ಇಂದಿನಿಂದ ಅಂದರೆ ಆಗಸ್ಟ್ 1ರಿಂದ ದ್ವಿಚಕ್ರ (tw0-wheelers), ತ್ರಿಚಕ್ರ ವಾಹನ ಮತ್ತು ಟ್ರ್ಯಾಕ್ಟರ್ ಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಆದರೆ, ಎಕ್ಸ್ ಪ್ರೆಸ್ ವೇನಲ್ಲಿ ದೃಷ್ಟಿ ಹಾಯಿಸಿದರೆ, ಈ ಆದೇಶ ಕೇವಲ ಕಾಗದದ ಮೇಲಿದೆ, ರಸ್ತೆಗೆ ಬಂದಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ದ್ವಿಚಕ್ರ ವಾಹನ ಸವಾರರು ಎಂದಿನಂತೆ ರಸ್ತೆಯಲ್ಲಿ ತಮ್ಮ ತಮ್ಮ ಕಾರ್ಯಗಳ ನಿಮಿತ್ತ ಸಂಚರಿಸುತ್ತಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳು ಅಥವಾ ಸಿಬ್ಬಂದಿ ಬೈಕ್ ಸವಾರರನ್ನು ತಡೆಯುತ್ತಿಲ್ಲ, ಪ್ರಶ್ನಿಸುತ್ತಿಲ್ಲ. ಟೋಲ್ ಪ್ಲಾಜಾದ ಸಿಬ್ಬಂದಿ ಕೂಡ ಪ್ರಾಧಿಕಾರದ ಆದೇಶ ಮತ್ತು ತಮ್ಮ ನಡುವೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ರಾಮ್ ಹೆಚ್ಚಿನ ವಿವರಣೆಯನ್ನು ನೀಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ