ವಿಶ್ವಕ್ಕೆ ಶಾಂತಿ ಭಂಗ, ಸರ್ವರೂ ಎಚ್ಚರದಿಂದಿರಬೇಕು: ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ಕಾರ್ಣಿಕ

Updated By: Ganapathi Sharma

Updated on: Oct 03, 2025 | 9:15 AM

ಚಿಕ್ಕಮಗಳೂರಿನ ಬೀರೂರಿನ ಮಹಾನವಮಿ ಬಯಲಿನಲ್ಲಿ ನಡೆದ ಉತ್ಸವದಲ್ಲಿ ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಮಾರ್ಮಿಕ ಕಾರ್ಣಿಕ ನುಡಿದರು. ವಿಶ್ವಕ್ಕೆ ಶಾಂತಿ ಭಂಗ, ವರುಣಾರ್ಭಟ ಇತ್ಯಾದಿ ಎಚ್ಚರಿಕೆ ನೀಡಿದ ಅವರು, ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ನುಡಿದಿದ್ದಾರೆ. ಕಾರ್ಣಿಕ ನುಡಿಯ ವಿಡಿಯೋ ಇಲ್ಲಿದೆ.

ಚಿಕ್ಕಮಗಳೂರು, ಅಕ್ಟೋಬರ್ 3: ‘ಇಟ್ಟ ರಾಮರ ಬಾಣ ಹುಸಿಯಿಲ್ಲ, ಧರ್ಮ-ಅಧರ್ಮ ಸಂಕಷ್ಟವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು, ಧರೆಗೆ ವರುಣನ ಆಗಮನವಾಯಿತು, ಸರ್ವರೂ ಎಚ್ಚರದಿಂದಿರಬೇಕು ಪರಾಕ್’ ಎಂದು ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಮಾರ್ಮಿಕವಾಗಿ ಕಾರ್ಣಿಕ ನುಡಿದಿದ್ದಾರೆ. ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ ಕಾರ್ಣಿಕ ನುಡಿಯಲಾಗಿದೆ. ದಶರಥ ಪೂಜಾರಿ ಕಳೆದ 15 ವರ್ಷಗಳಿಂದ ಕಾರ್ಣಿಕ ನುಡಿಯುತ್ತಿದ್ದಾರೆ. ಉತ್ತರ ಕರ್ನಾಟಕ ಪ್ರವಾಹ, ರಾಜಕೀಯ ತಲ್ಲಣಗಳ ಹಿನ್ನೆಲೆಯಲ್ಲಿ ಇದೀಗ ಭಕ್ತರು ಗೊರವಯ್ಯನ ಕಾರ್ಣಿಕವನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ