Most Orderd Food in India: ಫುಡ್ ಌಪ್​ಗಳಲ್ಲಿ ಅತಿ ಹೆಚ್ಚು ಆರ್ಡರ್​ ಆಗುತ್ತಿರುವ ಫುಡ್ ಯಾವುದು ಗೊತ್ತಾ?

| Updated By: ಆಯೇಷಾ ಬಾನು

Updated on: Dec 23, 2021 | 8:27 AM

ಫುಡ್ ಡೆಲಿವರಿ ಌಪ್ ಸ್ವಿಗ್ಗಿ ಕೊಟ್ಟಿದೆ ಬಿರಿಯಾನಿ ಪ್ರಿಯರು ಖುಷಿಯಾಗುವ ಸುದ್ದಿ. ಫುಡ್ ಌಪ್ಗಳಿಗೆ ಭರ್ತಿ ಬ್ಯುಸಿನೆಸ್ ಕೊಡ್ತಿದ್ದಾರೆ ಭಾರತದ ಬಿರಿಯಾನಿ ಪ್ರಿಯರು. ಸ್ವಿಗ್ಗಿಯ ಆರನೇ ರಾಜ್ಯವಾರು ಅಂಕಿಅಂಶಗಳೇ ಹೇಳ್ತವೆ ಬಿರಿಯಾನಿಗೆ ಡಿಮ್ಯಾಂಡ್ ಹೆಚ್ಚು.

ಬೆಂಗಳೂರು: ಭಾರತದ ಜನಪ್ರಿಯ ಫುಡ್ ಡೆಲಿವರಿ ಌಪ್ ಸ್ವಿಗ್ಗಿ ಸಖತ್ ಇಂಟ್ರೆಸ್ಟಿಂಗ್ ಡೇಟಾ ಒಂದನ್ನ ರಿಲೀಸ್ ಮಾಡಿದೆ. ಭಾರತದಲ್ಲಿ ಒಂದು ನಿಮಿಷಕ್ಕೆ ಎಷ್ಟು ಬಿರಿಯಾನಿ ಆರ್ಡರ್ ಆಗುತ್ತೆ ಅನ್ನೋದು ಗೊತ್ತಾದ್ರೆ ಖಂಡಿತ ನಿಮಗೆ ಶಾಕ್ ಆಗದೆ ಇರೋದಿಲ್ಲ.

ಫುಡ್ ಡೆಲಿವರಿ ಌಪ್ ಸ್ವಿಗ್ಗಿ ಕೊಟ್ಟಿದೆ ಬಿರಿಯಾನಿ ಪ್ರಿಯರು ಖುಷಿಯಾಗುವ ಸುದ್ದಿ. ಫುಡ್ ಌಪ್ಗಳಿಗೆ ಭರ್ತಿ ಬ್ಯುಸಿನೆಸ್ ಕೊಡ್ತಿದ್ದಾರೆ ಭಾರತದ ಬಿರಿಯಾನಿ ಪ್ರಿಯರು. ಸ್ವಿಗ್ಗಿಯ ಆರನೇ ರಾಜ್ಯವಾರು ಅಂಕಿಅಂಶಗಳೇ ಹೇಳ್ತವೆ ಬಿರಿಯಾನಿಗೆ ಡಿಮ್ಯಾಂಡ್ ಹೆಚ್ಚು. ಹೈದ್ರಾಬಾದ್, ಕೋಲ್ಕತ್ತಾ, ಚೆನ್ನೈ, ಲಕ್ನೋ ನಗರಗಳಲ್ಲಿ ಪ್ರತಿ ನಿಮಿಷಕ್ಕೆ ದಾಖಲೆ ಬಿರಿಯಾನಿ ಆರ್ಡರ್ ಆಗುತ್ತಿದೆ. ನಾಲ್ಕು ನಗರಗಳಿಂದ 1ನಿಮಿಷಕ್ಕೆ 115 ಚಿಕನ್ ಬಿರಿಯಾನಿಗಳು ಆರ್ಡರ್ ಆಗ್ತಿವೆ. ಪ್ರತಿ ಸೆಕೆಂಡ್ಗೆ 2 ಬಿರಿಯಾನಿ ಆರ್ಡರ್ ಮಾಡ್ತಿದ್ದಾರೆ ಆಹಾರ ಪ್ರಿಯರು. ಹೊಸದಾಗಿ ಌಪ್ನಲ್ಲಿ ಆರ್ಡರ್ ಮಾಡೋ ಗ್ರಾಹಕರ ಮೊದಲ ಆಯ್ಕೆ ಚಿಕನ್ ಬಿರಿಯಾನಿ. ಬಿರಿಯಾನಿ ಹೊರತುಪಡಿಸಿದ್ರೆ ಹೆಚ್ಚು ಜನರು ಆರ್ಡರ್ ಮಾಡುವ ಸ್ನ್ಯಾಕ್ಸ್ ಸಮೋಸಾ. ಚಿಕನ್ ವಿಂಗ್ಸ್ಗಿಂತ6 ಪಟ್ಟು ಹೆಚ್ಚು ಸಮೋಸಾವನ್ನ ಸಂಜೆಯ ಆಹಾರವಾಗಿ ಜನರು ಆರ್ಡರ್ ಮಾಡ್ತಾರೆ. ರಾತ್ರಿ 10 ಗಂಟೆ ನಂತರ ಚೀಜ್ ಗಾರ್ಲಿಕ್ ಬ್ರೆಡ್, ಪಾಪ್ಕಾರ್ನ್, ಫ್ರೆಂಚ್ ಫ್ರೈಸ್ಗೆ ಹೆಚ್ಚು ಬೇಡಿಕೆ ಇದೆ.