Karnataka Assembly Polls: 24 ದಿನಗಳಿಂದ ಒಂದು ಗಂಟೆಯೂ ನಿದ್ರಿಸದೆ ಕ್ಷೇತ್ರ ಸುತ್ತುತ್ತಿದ್ದೇನೆ ಎಂದು ಅಮಿತ್ ಶಾಗೆ ಹೇಳಿದ ಸೋಮಣ್ಣ

|

Updated on: May 02, 2023 | 4:12 PM

15 ವರ್ಷಗಳಿಂದ ಸಿದ್ದರಾಮಯ್ಯ ಮತ್ತು ಅವರ ಮಗನಿಗೆ ಅವಕಾಶ ನೀಡಿದ್ದೀರಿ, ನನಗೆ ಒಂದೇ ಒಂದು ಅವಕಾಶ ಕೊಡಿ ಎಂದು ಸೋಮಣ್ಣ ಮತದಾರರಿಗೆ ಮನವಿ ಮಾಡಿದರು.

ಮೈಸೂರು: ವರುಣಾದಲ್ಲಿ ಇಂದು ಬಿಜೆಪಿ ನಾಯಕರು ಅಬ್ಬರಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಇತರ ನಾಯಕರೊಂದಿಗೆ ವರುಣಾಗೆ ಆಗಮಿಸಿರುವುದು ಅಲ್ಲಿನ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣಗೆ (V Somanna) ಎಲ್ಲಿಲ್ಲದ ಬಲ ನೀಡಿದೆ. ಅಮಿತ್ ಶಾ ಸಮ್ಮುಖದಲ್ಲಿ ಅಬ್ಬರದ ಭಾಷಣ ಮಾಡಿದ ಅವರು 15 ವರ್ಷಗಳಿಂದ ಸಿದ್ದರಾಮಯ್ಯ ಮತ್ತು ಅವರ ಮಗನಿಗೆ ಅವಕಾಶ ನೀಡಿದ್ದೀರಿ, ನನಗೆ ಒಂದೇ ಒಂದು ಅವಕಾಶ ಕೊಡಿ, ನಾನು ಈ ಮೊದಲು ಪ್ರತಿನಿಧಿಸುತ್ತಿದ್ದ ಗೋವಿಂದರಾಜ ನಗರದ ಹಾಗೆ ವರುಣಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುತ್ತೇನೆ ಎಂದು ಹೇಳಿದರು. ನಂತರ ಅವರು ಅಮಿತ್ ಶಾ ಕಡೆ ತಿರುಗಿ ಸರ್, ನಾನು 24 ಗಂಟೆಗಳಿಂದ ಕ್ಷೇತ್ರ ಸುತ್ತುತ್ತಿದ್ದೇನೆ, ಈ 24 ದಿನಗಳಲ್ಲಿ ಒಂದು ಗಂಟೆಯೂ ನಿದ್ರಿಸಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ