Karnataka Assembly Polls: ಡಿಕೆ ಶಿವಕುಮಾರ್ ಮತ್ತು ಟಿವಿ9 ಸಿಬ್ಬಂದಿ ಪಯಣಿಸುತ್ತಿದ್ದ ಹೆಲಿಕಾಪ್ಟರ್ಗೆ ಅಪ್ಪಳಿಸಿದ ರಣಹದ್ದು, ಎಲ್ಲರೂ ಅಪಾಯದಿಂದ ಪಾರು
ಹಕ್ಕಿ ಚಾಪರ್ ಗೆ ಬಡಿದಾಕ್ಷಣ ಅದನ್ನು ವಾಪಸ್ಸು ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ಸು ತರಲಾಗಿದೆ.
ಬೆಂಗಳೂರು: ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರೊಂದರಲ್ಲಿ ಮುಳುಬಾಗಿಲುಗೆ ಪಯಣಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಟಿವಿ9 ಕನ್ನಡ ವಾಹಿನಿ ವರದಿಗಾರ (reporter) ಹಾಗೂ ಕೆಮೆರಾಮನ್ (cameraman) ಅಪಾಯದಿಂದ ಪಾರಾಗಿದ್ದಾರೆ. ಅಸಲಿಗೆ ನಡೆದ ಸಂಗತಿಯೇನೆಂದರೆ ಇವರು ಪ್ರಯಾಣಿಸುತ್ತಿದ್ದ ಚಾಪರ್ ಗೆ ಒಂದು ರಣಹದ್ದು ಬಂದು ಅಪ್ಪಳಿಸಿದೆ. ಅದು ಅಪ್ಪಳಿಸಿದ ರಭಸಕ್ಕೆ ಹೆಲಿಕಾಪ್ಟರ್ ಗಾಜು ಒಡೆದು ಪುಡಿಯಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಕ್ಕಿ ಚಾಪರ್ ಗೆ ಬಡಿದಾಕ್ಷಣ ಅದನ್ನು ವಾಪಸ್ಸು ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ಸು ತರಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos