ನನ್ನ ಸಾಮರ್ಥ್ಯವನ್ನು ಬಳಸಿಕೊಳ್ಳದ ಪಕ್ಷದಲ್ಲಿದ್ದೇನು ಪ್ರಯೋಜನ? ಕಾಂಗ್ರೆಸ್ ಸೇರುತ್ತಿದ್ದೇನೆ: ಕೆಪಿ ನಂಜುಂಡಿ

|

Updated on: Apr 23, 2024 | 12:04 PM

ಎಮ್ಮೆಲ್ಸಿ ಅನ್ನೋದು ಒಂದು ಗೌರವವೇ ಹೊರತು ಅಧಿಕಾರವಲ್ಲ, ತಾನು ಯಾವ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷವನ್ನು ದೂರುತ್ತಿಲ್ಲ ಮತ್ತು ಮುಂದೆಯೂ ದೂರಲ್ಲ, ತನ್ನ ದೂರು ಇರೋದು ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳುದಿರುವ ಬಗ್ಗೆ, ಸಮಾಜದವರು ಅಲ್ಲಿದ್ದು ಏನು ಸಾಧಿಸುತ್ತಿರುವೆ, ಆಚೆ ಬಾ ಎಂದು ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದರು ಎಂದು ನಂಜುಂಡಿ ಹೇಳಿದರು.

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (BS Yediyurappa) ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಮತ್ತು ವಿಶ್ವಕರ್ಮ ಸಮಾಜದ ನಾಯಕ ಕೆಪಿ ನಂಜುಂಡಿ (KP Nanjundi) ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು ಬಿಜೆಪಿ ತೊರೆಯುತ್ತಿದ್ದಾರೆ. ಸುಮಾರು ಒಂದು ವಾರದಿಂದ ಅವರು ಅಂದರೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಭೇಟಿಯ ನಂತರ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಮಾನಿ ಹುಟ್ಟಿದ್ದು ಸುಳ್ಳಲ್ಲ. ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ತೆರಳಿ ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ನಂಜುಂಡಿ, ತನ್ನಂಥ ಹೋರಾಟಗಾರನ ಸಾಮರ್ಥ್ಯ ಮತ್ತು ಕ್ಷಮತೆಗೆ ಅನುಗುಣವಾಗಿ ಕೆಲಸ ಮಾಡುವ ಅವಕಾಶಗಳನ್ನು ಬಿಜೆಪಿ ನೀಡಲಿಲ್ಲ ಮತ್ತು ಕೋವಿಡ್ ಹಾಗೂ ಬೇರೆ ಸಂದರ್ಭಗಳಲ್ಲೂ ತನ್ನ ಸಮುದಾಯದ ಜನರನ್ನು ಕಡೆಗಣಿಸಲಾಯಿತು ಎಂದು ನಂಜುಂಡಿ ಹೇಳಿದರು. ಎಮ್ಮೆಲ್ಸಿ ಅನ್ನೋದು ಒಂದು ಗೌರವವೇ ಹೊರತು ಅಧಿಕಾರವಲ್ಲ, ತಾನು ಯಾವ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷವನ್ನು ದೂರುತ್ತಿಲ್ಲ ಮತ್ತು ಮುಂದೆಯೂ ದೂರಲ್ಲ, ತನ್ನ ದೂರು ಇರೋದು ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳುದಿರುವ ಬಗ್ಗೆ, ಸಮಾಜದವರು ಅಲ್ಲಿದ್ದು ಏನು ಸಾಧಿಸುತ್ತಿರುವೆ, ಆಚೆ ಬಾ ಎಂದು ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದರು ಎಂದು ನಂಜುಂಡಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಲೋಕಸಭೆ ಚುನಾವಣೆ ಸಮಯದಲ್ಲೇ ಬಿಜೆಪಿ ಎಂಎಲ್​ಸಿ ಕೆಪಿ ನಂಜುಂಡಿ ರಾಜೀನಾಮೆ, ನಾಳೆ ಕಾಂಗ್ರೆಸ್ ಸೇರ್ಪಡೆ

Follow us on