Loading video

Video: ಅರವಿಂದ್ ಕೇಜ್ರಿವಾಲ್​ರ ಶೀಶ್​ ಮಹಲ್​ ಹೇಗಿದೆ ನೋಡಿ

|

Updated on: Dec 10, 2024 | 11:27 AM

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ರ ವಿರುದ್ಧ ಸದಾ ಭ್ರಷ್ಟಾಚಾರ ಆರೋಪ ಮಾಡುವ ಬಿಜೆಪಿಯು ಅವರ ಶೀಶ್​ ಮಹಲ್​ನ ವಿಡಿಯೋವನ್ನು ಹಂಚಿಕೊಂಡಿದೆ. ದೆಹಲಿಯ 6 ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ಅಧಿಕೃತ ಬಂಗಲೆಯನ್ನು ಅರವಿಂದ್ ಕೇಜ್ರಿವಾಲ್ ಇನ್ನೂ ಔಪಚಾರಿಕವಾಗಿ ಖಾಲಿ ಮಾಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿಯು ನಿರ್ಮಾಣದಲ್ಲಿನ ಅಕ್ರಮಗಳು ಮತ್ತು ದುಬಾರಿ ಇಂಟೀರಿಯರ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಖರ್ಚು ಮಾಡಿದ ಹಣದ ಕುರಿತು ಮಾತನಾಡಿದೆ.

ಬಿಜೆಪಿ ನಾಯಕ ವೀರೇಂದ್ರ ಸಚ್​ದೇವ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕೇಜ್ರಿವಾಲ್ ಮನೆಯನ್ನು ರೆಸಾರ್ಟ್​ ಎಂದು ಬಣ್ಣಿಸಿದ್ದಾರೆ. ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡು ಅವರು ತನಗಾಗಿ 7-ಸ್ಟಾರ್ ರೆಸಾರ್ಟ್ ಅನ್ನು ನಿರ್ಮಿಸಿದ್ದಾರೆ. ಒಟ್ಟು 3.5 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಕೋವಿಡ್ ಹಂತದಲ್ಲಿ ಹೆಚ್ಚಿನ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಾಗ ಕೇಜ್ರಿವಾಲ್ ಅವರು ತಮ್ಮ ಬಂಗಲೆಯನ್ನು ಅಲಂಕರಿಸಲು ಸುಮಾರು 45 ಕೋಟಿ ರೂಪಾಯಿಗಳನ್ನು ಯಾವ ಅಧಿಕಾರದಿಂದ ಖರ್ಚು ಮಾಡಿದ್ದಾರೆಂದು ಪ್ರಶ್ನಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ