Assembly Polls: ಬಿಜೆಪಿ ಸರ್ಕಾರ ಅಕ್ಕಿ, ಮೊಸರು ಮೇಲೆ ಜಿಎಸ್ ಟಿ ವಿಧಿಸಿ ಬಡವರ ರಕ್ತ ಹೀರುತ್ತಿದೆ: ಕೃಷ್ಣ ಭೈರೇಗೌಡ

Assembly Polls: ಬಿಜೆಪಿ ಸರ್ಕಾರ ಅಕ್ಕಿ, ಮೊಸರು ಮೇಲೆ ಜಿಎಸ್ ಟಿ ವಿಧಿಸಿ ಬಡವರ ರಕ್ತ ಹೀರುತ್ತಿದೆ: ಕೃಷ್ಣ ಭೈರೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 27, 2023 | 3:50 PM

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಜ್ಜಿಗೆ ಮೊಸರು, ಅಕ್ಕಿ, ಅವಲಕ್ಕಿಯ ಮೇಲೆ ಜಿ ಎಸ್ ಟಿ ಹೇರಿ ಬಡವರನ್ನು ಸುಲಿಯುತ್ತದೆ, ಆದರೆ ಅಂಬಾನಿ ಮತ್ತು ಅದಾನಿಗಳಂಥ ಕುಬೇರರಿಗೆ ಟ್ಯಾಕ್ ವಿನಾಯಿತಿ ನೀಡುತ್ತದೆ ಎಂದು ಭೈರೇಗೌಡ ಹೇಳಿದರು.

ಮಂಡ್ಯ:  ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಮಂಡ್ಯ ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣ ಭೈರೇಗೌಡ (Krishna Byre Gowda) ಅವರು ಬಿಜೆಪಿ ಸರ್ಕಾರಗಳನ್ನು (BJP governments) ರೈತವಿರೋಧಿ ಎಂದು ಜರಿದರು. 2013 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಹಾಲಿನ ಮೇಲೆ ರೈತರಿಗೆ ಸಿಗುವ ಸಬ್ಸಿಡಿಯನ್ನು (subsidy) ರೂ. 5 ಹೆಚ್ಚು ಮಾಡಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ರೈತರಿಗೆ ಸಿಗುವ ಸಹಾಯಧನವನ್ನು 5 ನಯಾಪೈಸೆಯೂ ಹೆಚ್ಚು ಮಾಡಿಲ್ಲ ಎಂದು ಭೈರೇಗೌಡ ಹೇಳಿದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಜ್ಜಿಗೆ ಮೊಸರು, ಅಕ್ಕಿ, ಅವಲಕ್ಕಿಯ ಮೇಲೆ ಜಿ ಎಸ್ ಟಿ ಹೇರಿ ಬಡವರನ್ನು ಸುಲಿಯುತ್ತದೆ, ಆದರೆ ಅಂಬಾನಿ ಮತ್ತು ಅದಾನಿಗಳಂಥ ಕುಬೇರರಿಗೆ ಟ್ಯಾಕ್ ವಿನಾಯಿತಿ ನೀಡುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ