Assembly Polls | ಸಿದ್ದರಾಮಯ್ಯ ಯಾದಗಿರಿಯಿಂದ ಸ್ಪರ್ಧಿಸುವುದಾದರೆ ರೂ. 1 ಕೋಟಿ ದೇಣಿಗೆ ನೀಡುತ್ತೇನೆ: ಚಂದ್ರಾಯ ನಾಗರಾಳ್, ಬಿಜೆಪಿ ಮುಖಂಡ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭೂಮಿ ಇದ್ದವನೇ ಬಡವನಾಗಿಬಿಟ್ಟಿದ್ದಾನೆ, ಹಾಗಾಗಿ ತಾವು ಬೇಸಾಯ ಬಿಟ್ಟು ಜಮೀನು ಮಾರಿ ಬಂದ ಹಣವನ್ನು ಸಿದ್ದರಾಮಯ್ಯನವರಿಗೆ ನೀಡುವುದಾಗಿ ನಾಗರಾಳ್ ಹೇಳುತ್ತಾರೆ.
ಯಾದಗಿರಿ: ಜಿಲ್ಲೆಯ ವಡಗೇರಾದವರಾಗಿರುವ ಬಿಜೆಪಿ ಮುಖಂಡ (BJP leader) ಚಂದ್ರಾಯ ನಾಗರಾಳ್ (Chandraya Nagral) ತಮ್ಮ ಪಕ್ಷದಿಂದ ಭ್ರಮನಿರಸನಗೊಂಡಿರುವಂತಿದೆ. ಕಾಂಗ್ರೆಸ್ ಪಕ್ಷದೆಡೆ ಬಹಿರಂಗವಾಗಿ ಒಲವು ಪ್ರದರ್ಶಿಸುತ್ತಿರುವ ನಾಗರಾಳ್ ಅವರು ಆ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಯಾದಗಿರಿ ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಂದು ಕೋಟಿ ರೂ. ದೇಣಿಗೆ ನೀಡುವುದರ ಜೊತೆ 50,000-60,000 ಮತಗಳ ಅಂತರದಿಂದ ಅವರನ್ನು ಗೆಲ್ಲಿಸುವ ಆಶ್ವಾಸನೆ ನೀಡುತ್ತಾರೆ. ಯಾಕೆ ಸಿದ್ದರಾಮಯ್ಯನವರ ಬಗ್ಗೆ ಅಷ್ಟೆಲ್ಲ ಒಲವು ಅಂತ ಟಿವಿ9 ಕನ್ನಡ ವಾಹಿನಿ ಯಾದಗಿರಿ ವರದಿಗಾರ ಕೇಳಿದರೆ, ಅವರಿಂದ ಮಾತ್ರ ಅಭಿವೃದ್ಧಿ ಕೆಲಸಗಳು ಸಾಧ್ಯ, ಬಿಜೆಪಿ ಸರ್ಕಾರದಿಂದ ಕೆಲಸಗಳು ಆಗಿಲ್ಲ. ಹಿಂದೆ ಭೂಮಿ ಇದ್ದವನು ಬಡವನಲ್ಲ ಅಂತ ಹೇಳುತ್ತಿದ್ದರು, ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭೂಮಿ ಇದ್ದವನೇ ಬಡವನಾಗಿಬಿಟ್ಟಿದ್ದಾನೆ, ಹಾಗಾಗಿ ತಾವು ಬೇಸಾಯ ಬಿಟ್ಟು ಜಮೀನು ಮಾರಿ ಬಂದ ಹಣವನ್ನು ಸಿದ್ದರಾಮಯ್ಯನವರಿಗೆ ನೀಡುವುದಾಗಿ ನಾಗರಾಳ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ