Ramanagara: ಚನ್ನಪಟ್ಟಣ ಬಮೂಲ್ ಕಚೇರಿಯಲ್ಲಿ ಜೆಡಿ(ಎಸ್) ಮುಖಂಡನ ಜೋರು ಧ್ವನಿಯಲ್ಲಿ ಅರಚಾಟ!

Ramanagara: ಚನ್ನಪಟ್ಟಣ ಬಮೂಲ್ ಕಚೇರಿಯಲ್ಲಿ ಜೆಡಿ(ಎಸ್) ಮುಖಂಡನ ಜೋರು ಧ್ವನಿಯಲ್ಲಿ ಅರಚಾಟ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 27, 2023 | 12:49 PM

ಕೊನೆಗೆ ಪೊಲೀಸ್ ಆಧಿಕಾರಿಯೊಬ್ಬರು ತಾಳ್ಮೆ ಕಳೆದುಕೊಂಡು, ಇಲ್ಲಿಂದ ಜಾಗ ಖಾಲಿ ಮಾಡಿದರೆ ಸರಿ, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಜೋರು ಮಾಡಿದಾಗ ಧ್ವನಿವೀರರು ತೆಪ್ಪಗಾಗಿ ಅಲ್ಲಿಂದ ಹೊರಡುತ್ತಾರೆ.

ರಾಮನಗರ:  ಜಿಲ್ಲೆಯ ಚನ್ನಪಟ್ಟಣದ ಬಮೂಲ್ ಕಚೇರಿ (Bamul office) ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳ ಮುಖಂಡರು ಕಿತ್ತಾಡಿದ ಪ್ರಸಂಗ ನಡೆದಿದೆ. ಬಮೂಲ್ ಸಂಸ್ಥೆಯ ನಿರ್ದೇಶಕ ಹೆಚ್ ಸಿ ಜಯಮುತ್ತು (HC Jayamuthu) ಮತ್ತು ಸರ್ಕಾರದ ನಿರ್ದೇಶಿತ ನಿರ್ದೇಶಕ ಎಸ್ ಲಿಂಗೇಶ್ ಕುಮಾರ (S Lingesh Kumar) ಅವರ ನಡುವೆ ಅದ್ಯಾವುದೋ ವಿಷಯಕ್ಕೆ ಕಲಹ ತಲೆದೋರಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ಕಚೇರಿಯಲ್ಲಿ ಗಲಾಟೆ ಶುರುವಿಟ್ಟುಕೊಂಡಿದ್ದಾರೆ. ಲಿಂಗೇಶ್ ಕುಮಾರ್ ಜೋರು ಧ್ವನಿಯಲ್ಲಿ ಮತ್ತು ಬೆದರಿಕೆ ಧಾಟಿಯಲ್ಲಿ ಮಾತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೊನೆಗೆ ಪೊಲೀಸ್ ಆಧಿಕಾರಿಯೊಬ್ಬರು ತಾಳ್ಮೆ ಕಳೆದುಕೊಂಡು, ಇಲ್ಲಿಂದ ಜಾಗ ಖಾಲಿ ಮಾಡಿದರೆ ಸರಿ, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಜೋರು ಮಾಡಿದಾಗ ಧ್ವನಿವೀರರು ತೆಪ್ಪಗಾಗಿ ಅಲ್ಲಿಂದ ಹೊರಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ