Karnataka Assembly Polls: ಈಶ್ವರಪ್ಪ ಮಗನಿಗೂ ಟಿಕೆಟ್ ಇಲ್ಲ, ಹೈಕಮಾಂಡ್ ಆಯ್ಕೆ ಚನ್ನಬಸಪ್ಪ ಗೆಲುವಿಗೆ ಶಕ್ತಿಮೀರಿ ಪ್ರಯತ್ನ ಎಂದ ಮಾಜಿ ಸಚಿವ
ಈ ನಿರಾಶೆಯನ್ನೂ ಸ್ಪೋರ್ಟ್ ಆಗಿ ಸ್ವೀಕರಿಸಿರುವ ಈಶ್ವರಪ್ಪ; ಚನ್ನಬಸ್ಸಪ್ಪ ಒಬ್ಬ ಉತ್ತಮ ಸಂಘಟಕ ಮತ್ತು ನಿಷ್ಠಾವಂತ ನಾಯಕನಾಗಿದ್ದಾರೆ, ಅವರ ಆಯ್ಕೆ ಒಂದು ಒಳ್ಳೆಯ ನಿರ್ಧಾರ ಎಂದು ಹೇಳಿದರು.
ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪನವರಿಗೆ (KS Eshwarappa) ಎರಡನೇ ಬಾರಿ ನಿರಾಸೆಯಾಗಿದೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ವರಿಷ್ಠರು ತಮಗೆ ಟಿಕೆಟ್ ನಿರಾಕರಿಸಿದ ಬಳಿಕ ಅವರು ತಮ್ಮ ಪುತ್ರ ಕೆಈ ಕಾಂತೇಶ್ ಗೆ (KE Kantesh) ಕೊಡಿ ಅಂತ ಬೇಡಿಕೆಯಿಟ್ಟಿದ್ದರು. ಆದರೆ ಅವರ ಬೇಡಿಕೆಯನ್ನು ತಿರಸ್ಕರಿಸಿದ ಹೈಕಮಾಂಡ್ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪಗೆ (Channabasappa) ಟಿಕೆಟ್ ನೀಡಿದೆ. ಈ ನಿರಾಶೆಯನ್ನೂ ಸ್ಪೋರ್ಟ್ ಆಗಿ ಸ್ವೀಕರಿಸಿರುವ ಈಶ್ವರಪ್ಪ; ಚನ್ನಬಸ್ಸಪ್ಪ ಒಬ್ಬ ಉತ್ತಮ ಸಂಘಟಕ ಮತ್ತು ನಿಷ್ಠಾವಂತ ನಾಯಕನಾಗಿದ್ದಾರೆ, ಅವರ ಆಯ್ಕೆ ಒಂದು ಒಳ್ಳೆಯ ನಿರ್ಧಾರ ಎಂದು ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಟಿ ಕರೆದು ಮಾತಾಡಿದ ಅವರು ಚನ್ನಬಸ್ಸಪ್ಪರ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 20, 2023 10:18 AM
Latest Videos