Flipkart Exchange Offer: ಹಳೆಯ ಫೋನ್ ಕೊಟ್ಟು ಹೊಸ ಸ್ಮಾರ್ಟ್ಫೋನ್ ಖರೀದಿಸಲು ವಿಶೇಷ ಆಫರ್
ಹೊಸ ಫೋನ್ ಖರೀದಿಸಿದ ಗ್ರಾಹಕರು ತಮ್ಮ ಹಳೆಯ ಫೋನ್ನಿಂದ ಡೇಟಾ, ಫೋಟೊವನ್ನು ಹೊಸ ಫೋನ್ಗೆ ವರ್ಗಾವಣೆ ಮಾಡಲು 10 ದಿನಗಳ ಕಾಲಾವಕಾಶ ನೀಡುತ್ತದೆ. ಬಳಿಕ, ಹಳೆಯ ಫೋನ್ ನೀಡಬಹುದು.
ಫ್ಲಿಪ್ಕಾರ್ಟ್ ಭಾರತದಲ್ಲಿ ಎಕ್ಸ್ಚೇಂಜ್ ನೌ, ಹ್ಯಾಂಡ್ ಓವರ್ ಲೇಟರ್ ಎಂಬ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಇದರ ಮೂಲಕ, ಗ್ರಾಹಕರು ಹಳೆಯ ಫೋನ್ ಅನ್ನು ಉತ್ತಮ ದರಕ್ಕೆ ಫ್ಲಿಪ್ಕಾರ್ಟ್ ಮೂಲಕ ವಿನಿಮಯ ಮಾಡಿಕೊಳ್ಳಬಹುದು. ಜತೆಗೆ, ಹೊಸ ಫೋನ್ ಅನ್ನು ಖರೀದಿಸಿ ನಂತರದ 10 ದಿನಗಳಲ್ಲಿ ತಮ್ಮ ಹಳೆಯ ಫೋನ್ ಹಸ್ತಾಂತರ ಮಾಡಬಹುದಾಗಿದೆ. ಬಹುತೇಕ ಎಲ್ಲ ಸ್ಮಾರ್ಟ್ಫೋನ್ ಬ್ರ್ಯಾಂಡ್ ಮತ್ತು ಮಾಡೆಲ್ಗಳಿಗೆ ಈ ಕೊಡುಗೆ ದೊರೆಯಲಿದೆ. ಅಂದರೆ, ಹೊಸ ಫೋನ್ ಖರೀದಿಸಿದ ಗ್ರಾಹಕರು ತಮ್ಮ ಹಳೆಯ ಫೋನ್ನಿಂದ ಡೇಟಾ, ಫೋಟೊವನ್ನು ಹೊಸ ಫೋನ್ಗೆ ವರ್ಗಾವಣೆ ಮಾಡಲು 10 ದಿನಗಳ ಕಾಲಾವಕಾಶ ನೀಡುತ್ತದೆ. ಬಳಿಕ, ಹಳೆಯ ಫೋನ್ ನೀಡಬಹುದು. ಅಂತಹ ಸಂದರ್ಭದಲ್ಲಿ, ಗ್ರಾಹಕರು ಬಯಸುವ ಮಾದರಿಯಲ್ಲಿ ಅವರಿಗೆ ಎಕ್ಸ್ಚೇಂಜ್ ಮೌಲ್ಯವನ್ನು ಕಂಪನಿ ನೀಡಲಿದೆ. ಇದರಿಂದ, ಹಳೆಯ ಫೋನ್ನಿಂದ ಯಾವುದೇ ಕಿರಿಕಿರಿಯಿಲ್ಲದೆ, ಹೊಸ ಫೋನ್ಗೆ ಡೇಟಾ, ಫೋಟೊ, ಮೀಡಿಯಾ ಫೈಲ್ಸ್ ವರ್ಗಾಯಿಸಬಹುದು.