Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಕಾಂತೇಶ್ ಗೆ ಟಿಕೆಟ್ ಸಿಗದ ನಿರಾಶೆ ಈಶ್ವರಪ್ಪ ವ್ಯಕ್ತಪಡಿಸುತ್ತಿಲ್ಲ, ಆದರೆ ಅವರ ಪತ್ನಿ ಜಯಲಕ್ಷ್ಮಿ ಪ್ರತಿಕ್ರಿಯೆ ಭಿನ್ನ

Karnataka Assembly Polls: ಕಾಂತೇಶ್ ಗೆ ಟಿಕೆಟ್ ಸಿಗದ ನಿರಾಶೆ ಈಶ್ವರಪ್ಪ ವ್ಯಕ್ತಪಡಿಸುತ್ತಿಲ್ಲ, ಆದರೆ ಅವರ ಪತ್ನಿ ಜಯಲಕ್ಷ್ಮಿ ಪ್ರತಿಕ್ರಿಯೆ ಭಿನ್ನ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 20, 2023 | 11:04 AM

ಚನ್ನಬಸಪ್ಪ, ಜಯಲಕ್ಷ್ಮಿಯವರಿಗೆ  ಸಿಹಿ ತಿನ್ನಿಸಲು ಮುಂದಾದಾಗ ಅದನ್ನು ನಿರಾಕರಿಸುವ ಅವರು ನಯವಾಗಿ ಸಿಹಿತಿಂಡಿಯ ತಟ್ಟೆಯನ್ನು ತಳ್ಳಿ, ಒಳನಡೆದು ಹೋಗುತ್ತಾರೆ.

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೆಎಸ್ ಈಶ್ವರಪ್ಪ (KS Eshwarappa ) ಕುಟುಂಬಕ್ಕೆ ದಕ್ಕಿಲ್ಲ. ಜಿಲ್ಲೆಯಲ್ಲಿ ಯುವ ನಾಯಕನಾಗಿ ಗುರುತಿಸಿಕೊಂಡಿರುವ ಚನ್ನಬಸಪ್ಪಗೆ ಪಕ್ಷ ಟಿಕೆಟ್ ನೀಡಿದೆ. ಕೆಈ ಕಾಂತೇಶ್ ಗೆ (KE Kantesh) ಟಿಕೆಟ್ ಸಿಗದ ಅಸಮಾಧಾನವನ್ನು ಈಶ್ವರಪ್ಪ ತೋರ್ಪಡಿಸುತ್ತಿಲ್ಲವಾದರೂ ಅವರ ಪತ್ನಿ ಜಯಲಕ್ಷ್ಮಿ (Jayalakshmi) ಮಾತ್ರ ತೀವ್ರ ನಿರಾಶರಾಗಿದ್ದಾರೆ. ಈ ವಿಡಿಯೋದಲ್ಲಿ ನೀವು ಅದನ್ನು ಗಮನಿಸಬಹುದು. ಇಂದು ಬೆಳಗ್ಗೆ ಚನ್ನಬಸಪ್ಪ ಈಶ್ವರಪ್ಪನರ ಮನೆಗೆ ಹೋಗಿ ಜಯಲಕ್ಷ್ಮಿ ಅವರ ಪಾದಮುಟ್ಟಿ ನಮಸ್ಕರಿಸಿದಾಗ ಅವರು ಅನ್ಯಮಮಸ್ಕತೆಯಿಂದ ಆಶೀರ್ವದಿಸುತ್ತಾರೆ. ಆಮೇಲೆ ಚನ್ನಬಸಪ್ಪ, ಜಯಲಕ್ಷ್ಮಿಯವರಿಗೆ  ಸಿಹಿ ತಿನ್ನಿಸಲು ಮುಂದಾದಾಗ ಅದನ್ನು ನಿರಾಕರಿಸುವ ಅವರು ನಯವಾಗಿ ಸಿಹಿತಿಂಡಿಯ ತಟ್ಟೆಯನ್ನು ತಳ್ಳಿ, ಒಳನಡೆದು ಹೋಗುತ್ತಾರೆ. ಅವರು ಅಸಂತುಷ್ಟರಾಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕೆ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ