Karnataka Assembly Polls: ಬಿಜೆಪಿಯ ಕರ್ನಾಟಕ ಚುನಾವಣಾ ಉಸ್ತುವಾರಿ ಕೆ ಅಣ್ಣಾಮಲೈ ಕೆಂಪು ಹೆಲಿಕಾಪ್ಟರ್ ನಲ್ಲಿ ರಾಯಚೂರಲ್ಲಿ ಲ್ಯಾಂಡ್ ಆಗಿದ್ದು ಗ್ರ್ಯಾಂಡ್ ಆಗಿತ್ತು!

Karnataka Assembly Polls: ಬಿಜೆಪಿಯ ಕರ್ನಾಟಕ ಚುನಾವಣಾ ಉಸ್ತುವಾರಿ ಕೆ ಅಣ್ಣಾಮಲೈ ಕೆಂಪು ಹೆಲಿಕಾಪ್ಟರ್ ನಲ್ಲಿ ರಾಯಚೂರಲ್ಲಿ ಲ್ಯಾಂಡ್ ಆಗಿದ್ದು ಗ್ರ್ಯಾಂಡ್ ಆಗಿತ್ತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 19, 2023 | 7:02 PM

ನಿನ್ನೆ ಕರಾವಳಿ ಭಾಗದಲ್ಲಿದ್ದ ಅವರು ಇಂದು ಮಧ್ಯಾಹ್ನ ಕೆಂಪುವರ್ಣದ ಹೆಲಿಕಾಪ್ಟರ್ ನಲ್ಲಿ ರಾಯಚೂರಿಗೆ ಅಗಮಿಸಿದರು.

ರಾಯಚೂರು: ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಹ ಉಸ್ತುವಾರಿಯಾಗಿ ನೇಮಿಸಿರುವುದನ್ನು ಈಗಾಗಾಲೇ ವರದಿ ಮಾಡಿದ್ದೇವೆ. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ (police official) ಕೆಲಸ ಮಾಡಿರುವ ಅಣ್ಣಾಮಲೈಗೆ ಕನ್ನಡ ಚೆನ್ನಾಗಿ ಗೊತ್ತಿದೆ. ಅವರು ನಿನ್ನೆಯಿಂದ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ್ದಾರೆ. ನಿನ್ನೆ ಕರಾವಳಿ ಭಾಗದಲ್ಲಿದ್ದ ಅವರು ಇಂದು ಮಧ್ಯಾಹ್ನ ಕೆಂಪುವರ್ಣದ ಹೆಲಿಕಾಪ್ಟರ್ ನಲ್ಲಿ ರಾಯಚೂರಿಗೆ (Raichur) ಅಗಮಿಸಿದರು. ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ಚಾಪರ್ ನಿಂದ ಇಳಿದ ಅಣ್ಣಾಮಲೈ ಅವರನ್ನು ಪಕ್ಷದ ಸ್ಥಳೀಯ ನಾಯಕರು ಸ್ವಾಗತಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ