ಕೋಲಾರ ಕ್ಷೇತ್ರದ ಬಗ್ಗೆ ಕುಮಾರಸ್ವಾಮಿಗಿರುವ ಗೊಂದಲವನ್ನು ಬಿಜೆಪಿ ವರಿಷ್ಠರು ಬಗೆಹರಿಸುತ್ತಾರೆ: ಬಿವೈ ವಿಜಯೇಂದ್ರ

|

Updated on: Mar 18, 2024 | 12:03 PM

ಕುಮಾರಸ್ವಾಮಿಯವರು 4-5 ಸ್ಥಾನಗಳನ್ನು ಜೆಡಿಎಸ್ ಗೆ ಬೇಕೆಂದು ಕೇಳಿದಾಗಲೇ ಬಿಜೆಪಿ ವರಿಷ್ಠರಲ್ಲಿ ಅಸಮಾಧಾನ ಮೂಡಿದ್ದು ಸುಳ್ಳಲ್ಲ. ಕೊನೆಗೆ ಹಾಸನ, ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳನ್ನು ತಮಗೆ ನೀಡಲಾಗಿದೆಯೆಂದು ಕಳೆದವಾರ ಕುಮಾರಸ್ವಾಮಿ ಹೇಳಿದ್ದರು. ಆದರೆ ಬಿಜೆಪಿ ಸಂಸದ ಪ್ರತಿನಿಧಿಸುವ ಕೋಲಾರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ಹಿಂದೇಟು ಹಾಕುತ್ತಿರುವುದು ಕುಮಾರಸ್ವಾಮಿಯವರಲ್ಲಿ ಅಸಮಾಧಾನ ಮೂಡಿಸಿದೆ ಮತ್ತು ಅದನ್ನವರು ಪರೋಕ್ಷವಾಗಿ ಹೊರಹಾಕುತ್ತಿದ್ದಾರೆ.

ಶಿವಮೊಗ್ಗ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯರು (HD Kumaraswamy) ಲೋಕಸಭಾ ಚುನಾವಣೆಗಾಗಿ (Lok Sabha polls) ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಬೆಳೆಸಿದಾಗಲೇ ಇಂಥದೊಂದು ಬೆಳವಣಿಗೆ ಸೃಷ್ಟಿಯಾಗಬಹುದೆಂದು ಕನ್ನಡಿಗರು ನಿರೀಕ್ಷಿಸಿದ್ದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಸನದಲ್ಲಿ ಮಾತ್ರ ಗೆದ್ದಿತ್ತು. ಆದಾಗ್ಯೂ ಕುಮಾರಸ್ವಾಮಿಯವರು 4-5 ಸ್ಥಾನಗಳನ್ನು ಜೆಡಿಎಸ್ ಗೆ ಬೇಕೆಂದು ಕೇಳಿದಾಗಲೇ ಬಿಜೆಪಿ ವರಿಷ್ಠರಲ್ಲಿ ಅಸಮಾಧಾನ ಮೂಡಿದ್ದು ಸುಳ್ಳಲ್ಲ. ಕೊನೆಗೆ ಹಾಸನ, ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳನ್ನು ತಮಗೆ ನೀಡಲಾಗಿದೆಯೆಂದು ಕಳೆದವಾರ ಕುಮಾರಸ್ವಾಮಿ ಹೇಳಿದ್ದರು. ಆದರೆ ಬಿಜೆಪಿ ಸಂಸದ ಪ್ರತಿನಿಧಿಸುವ ಕೋಲಾರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ಹಿಂದೇಟು ಹಾಕುತ್ತಿರುವುದು ಕುಮಾರಸ್ವಾಮಿಯವರಲ್ಲಿ ಅಸಮಾಧಾನ ಮೂಡಿಸಿದೆ ಮತ್ತು ಅದನ್ನವರು ಪರೋಕ್ಷವಾಗಿ ಹೊರಹಾಕುತ್ತಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರನ್ನು (BY Vijayendra) ಕೇಳಿದಾಗ, ತಮ್ಮ ಪಕ್ಷದ ವರಿಷ್ಠರು ಮತ್ತು ಕುಮಾರಸ್ವಾಮಿ ನಡುವೆ ಕೋಲಾರ ಕ್ಷೇತ್ರದ ವಿಷಯದಲ್ಲಿ ಏನು ಮಾತುಕತೆ ನಡೆದಿದೆ ಅಂತ ಗೊತ್ತಿಲ್ಲ, ಆದರೆ ತಮ್ಮ ನಾಯಕರು ಕುಮಾರಸ್ವಾಮಿಯವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಮತ್ತು ಗೊಂದಲವನ್ನು ನಿವಾರಣೆ ಮಾಡುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್ ಡಿ ಕುಮಾರಸ್ವಾಮಿ ರಾಜ್ಯಮಟ್ಟದ ನಾಯಕರು: ನಿಖಿಲ್ ಕುಮಾರಸ್ವಾಮಿ

Follow us on