ಡಬ್ಲ್ಯೂಪಿಎಲ್ ಗೆದ್ದಿರುವ ಸ್ಮೃತಿ ಮಂದಾನ ನೇತೃತ್ವದ ಆರ್ಸಿಬಿ ತಂಡವನ್ನು ಟ್ವೀಟ್ ಮೂಲಕ ಅಭಿನಂದಿಸಿದ ಸಿದ್ದರಾಮಯ್ಯ
ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ಟೀಮನ್ನು ಅಭಿನಂದಿಸಿರುವ ಅವರು ಕ್ರಿಕೆಟ್ ಪ್ರೇಮಿಯಾದ ತಮಗೆ ಹುಡುಗಿಯರು ನೀಡಿದ ಸಂಘಟಿತ ಪ್ರದರ್ಶನ ಮತ್ತು ಫೈನಲ್ ನಲ್ಲಿ ದೆಹಲಿ ತಂಡವನ್ನು ಮಣಿಸಿದ್ದು ಬಹಳ ಸಂತಸ ತಂದಿದೆ. ಅಭಿಮಾನಿಗಳ ದಶಕಗಳ ಕನಸು ಈಡೇರಿದೆ. ಹುಡುಗರೂ ಈ ಬಾರಿ ಗೆಲ್ಲಲಿ ಅಂತ ಹಾರೈಸಿರುವ ಸಿದ್ದರಾಮಯ್ಯ ಸಹ ‘ಈ ಸಲ ಕಪ್ ನಮ್ದೆ’ ಎಂದಿದ್ದಾರೆ.
ಬೆಂಗಳೂರು: ಏಳು ಕೋಟಿ ಕನ್ನಡಿಗರ ಮಾರ್ಚ್ 17 ರ ಸಂಡೇಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮಹಿಳಾ ತಂಡ ಸೂಪರ್ ಸಂಡೇ ಆಗಿ ಪರಿವರ್ತಿಸಿತು ಅನ್ನೋದರಲ್ಲಿ ಅನುಮಾನವಿಲ್ಲ. ನಿನ್ನೆ ರಾತ್ರಿ ದೆಹಲಿಯಲ್ಲಿ ಕನ್ನಡತಿ ಸ್ಮೃತಿ ಮಂದಾನ (Smriti Mandana) ನೇತೃತ್ವದ ಆರ್ ಸಿಬಿ ಟೀಮ್ ಡಿಸಿಯನ್ನು 8 ವಿಕೆಟ್ ಗಳಿಂದ ಸೋಲಿಸಿ ಡಬ್ಲ್ಯೂಪಿಎಲ್ (WPL) ಪ್ರಶಸ್ತಿ ಗೆದ್ದುಕೊಂಡಿದ್ದು ಕನ್ನಡಿಗರಲ್ಲಿ ಸಂಭ್ರಮ ಉಂಟುಮಾಡಿದೆ. ಪ್ರತಿಸಲ ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ ಶುರುವಾದಾಗ ಎಲ್ಲ ಕನ್ನಡಿಗರು ಈ ಸಲ ಕಪ್ ನಮ್ದೆ ಅನ್ನುತ್ತಿದ್ದರಾದರೂ ಆಸೆ ಮತ್ತು ನಿರೀಕ್ಷೆ ಕೈಗೂಡಿರಲಿಲ್ಲ. ಹುಡುಗರಿಂದ ಮಾಡಲಾಗದ್ದನ್ನು ನಮ್ಮ ಹುಡುಗಿಯರು ಮಾಡಿದ್ದಾರೆ. ತಂಡವನ್ನು ಅಭಿನಂದಿಸುವಲ್ಲಿಯೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಕನ್ನಡಿಗರ ನೇತೃತ್ವವಹಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ಟೀಮನ್ನು ಅಭಿನಂದಿಸಿರುವ ಅವರು ಕ್ರಿಕೆಟ್ ಪ್ರೇಮಿಯಾದ ತಮಗೆ ಹುಡುಗಿಯರು ನೀಡಿದ ಸಂಘಟಿತ ಪ್ರದರ್ಶನ ಮತ್ತು ಫೈನಲ್ ನಲ್ಲಿ ದೆಹಲಿ ತಂಡವನ್ನು ಮಣಿಸಿದ್ದು ಬಹಳ ಸಂತಸ ತಂದಿದೆ. ಅಭಿಮಾನಿಗಳ ದಶಕಗಳ ಕನಸು ಈಡೇರಿದೆ. ಹುಡುಗರೂ ಈ ಬಾರಿ ಗೆಲ್ಲಲಿ ಅಂತ ಹಾರೈಸಿರುವ ಸಿದ್ದರಾಮಯ್ಯ ಸಹ ‘ಈ ಸಲ ಕಪ್ ನಮ್ದೆ’ ಎಂದಿದ್ದಾರೆ.
ಇಂದಿನ #TATAWPL ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್.ಸಿ.ಬಿ ತಂಡ ಚಾಂಪಿಯನ್ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯಾಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ.
ಆರ್.ಸಿ.ಬಿ ಅಭಿಮಾನಿಗಳ ದಶಕಗಳ ಕನಸು ಇಂದು… pic.twitter.com/39HqqJyjVs
— Siddaramaiah (@siddaramaiah) March 17, 2024
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯದುವೀರ್ ಒಡೆಯರ್ ವಿರುದ್ಧ ಟೀಕಿಸದಂತೆ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ ಸಿಎಂ ಸಿದ್ದರಾಮಯ್ಯ