RCB Champion: ಆರ್ಸಿಬಿ ಟ್ರೋಫಿ ಎತ್ತಿ ಹಿಡಿದ ಕ್ಷಣ ಮಿಸ್ ಮಾಡಿದ್ರ?: ಇಲ್ಲಿದೆ ನೋಡಿ ವಿಡಿಯೋ
RCB Celebration: ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆರ್ಸಿಬಿ ಗೆದ್ದ ತಕ್ಷಣ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ. ಅಭಿಮಾನಿಗಳಂತು ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು. ಬೆಂಗಳೂರಿನಲ್ಲೂ ಸಡಗರ ಜೋರಾಗಿತ್ತು.
ಪುರುಷರ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ನ 16 ಸೀಸನ್‌ಗಳಲ್ಲಿ ಮಾಡಲಾಗದ್ದನ್ನು ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಎರಡು ಸೀಸನ್‌ಗಳಲ್ಲಿ ಮಾಡಿದೆ. ಕಳೆದ 16 ವರ್ಷಗಳಿಂದ ಟಿ20 ಲೀಗ್ ನಲ್ಲಿ ಟ್ರೋಫಿಗಾಗಿ ಪರದಾಡುತ್ತಿದ್ದ ಬೆಂಗಳೂರು ತಂಡದ ಆಸೆ ಕೊನೆಗೂ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಅಂತ್ಯ ಕಂಡಿದೆ. ಡಬ್ಲ್ಯೂಪಿಎಲ್ 2024 ಋತುವಿನ ಫೈನಲ್‌ನಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಎರಡನೇ ಋತುವಿನ ಈ ಫೈನಲ್‌ನಲ್ಲಿ, ಬೆಂಗಳೂರು ಅದ್ಭುತ ಪುನರಾಗಮನವನ್ನು ಮಾಡಿ ಇತಿಹಾಸದಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆರ್ಸಿಬಿ ಗೆದ್ದ ತಕ್ಷಣ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ. ಅಭಿಮಾನಿಗಳಂತು ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು. ಬೆಂಗಳೂರಿನಲ್ಲೂ ಸಡಗರ ಜೋರಾಗಿತ್ತು. ಆರ್ಸಿಬಿ ನಾಯಕಿ ಸ್ಮೃತಿ ಮಂಧಾನಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ರೋಫಿ ಹಸ್ತಾಂತರಿಸಿದರು. ಪ್ಲೇಯರ್ಸ್ ಮೈದಾನದಲ್ಲಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು. ಇದರ ವಿಡಿಯೋ ಇಲ್ಲಿದೆ ನೋಡಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ