AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli Video Call: ಆರ್​ಸಿಬಿ ಗೆದ್ದ ತಕ್ಷಣ ಮಂಧಾನಗೆ ಬಂತು ಕೊಹ್ಲಿಯ ವಿಡಿಯೋ ಕಾಲ್: ಏನು ಮಾತಾಡಿದ್ರು?

RCB Women Champions WPL 2024: ಮಹಿಳಾ ಪ್ರೀಮಿಯರ್ ಲೀಗ್ 2024ರ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿದ ನಂತರ, ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರಿಗೆ ವಿಶೇಷ ವಿಡಿಯೋ ಕರೆ ಮಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Virat Kohli Video Call: ಆರ್​ಸಿಬಿ ಗೆದ್ದ ತಕ್ಷಣ ಮಂಧಾನಗೆ ಬಂತು ಕೊಹ್ಲಿಯ ವಿಡಿಯೋ ಕಾಲ್: ಏನು ಮಾತಾಡಿದ್ರು?
Kohli Video call Smriti Mandhana
Vinay Bhat
|

Updated on:Mar 18, 2024 | 8:12 AM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹಿಳಾ ಪ್ರೀಮಿಯರ್ ಲೀಗ್ 2024 ರ ಫೈನಲ್‌ನ ಗೆಲುವಿನೊಂದಿಗೆ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಫ್ರಾಂಚೈಸ್ ತಮ್ಮ 16 ವರ್ಷಗಳ ಇತಿಹಾಸದಲ್ಲಿ ಅವರ ಮೊದಲ ಪ್ರಶಸ್ತಿಯನ್ನು ಎತ್ತಿಹಿಡಿಯುಡಿದಿದೆ. ಕಳೆದ 16 ವರ್ಷಗಳಿಂದ ಪುರುಷರು ಸಾಧಿಸಲಾಗದ್ದನ್ನ ಮಹಿಳೆಯರು ಕೇವಲ ಎರಡು ವರ್ಷಗಳಲ್ಲಿ ಸಾಧಿಸಿದ್ದಾರೆ. ಮಹಿಳಾ ತಂಡದ ಗೆಲುವು ಆರ್​ಸಿಬಿ ಪುರುಷರ ತಂಡಕ್ಕೂ ಅತಿ ಸಂತಸ ನೀಡಿದೆ. ಆರ್​ಸಿಬಿ ಗೆದ್ದ ತಕ್ಷಣ ಖುಷಿ ತಾಳಲಾರದೆ ವಿರಾಟ್ ಕೊಹ್ಲಿ ಅವರು ಸ್ಮೃತಿ ಮಂಧಾನಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ.

ಪಂದ್ಯ ಮುಗಿದ ನಂತರ, ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರಿಗೆ ವಿಶೇಷ ವಿಡಿಯೋ ಕರೆ ಮಾಡಿದ್ದಾರೆ. ಈ ಸಂದರ್ಭ ಬೃಹತ್ ಗೆಲುವು ಮತ್ತು ಕಪ್ ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಟ್ರೋಫಿ ಗೆದ್ದ ಬಳಿಕ ಪೋಸ್ಟ್ ಮ್ಯಾಚ್​ನಲ್ಲಿ ಸ್ಮೃತಿ ಮಂಧಾನ ಏನು ಹೇಳಿದ್ರು ಗೊತ್ತೇ?

ಸ್ಮೃತಿ ಮಂಧಾನಗೆ ವಿಡಿಯೋ ಕರೆ ಮಾಡಿದ ವಿರಾಟ್ ಕೊಹ್ಲಿ ವಿಡಿಯೋ:

ಅಂತೆಯೆ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಟ್ರೋಫಿ ಗೆದ್ದ ಬಳಿಕ ವಿಶೇಷ ಸಂದೇಶವನ್ನು ಹಂಚಿಕೊಂಡರು. ಅವರು ತಮ್ಮ ಸ್ಟೋರಿಯಲ್ಲಿ ‘ಸೂಪರ್ ವುಮೆನ್’ ಎಂಬ ಶೀರ್ಷಿಕೆ ಬರೆದು ಫೋಟೋ ಹಂಚಿಕೊಂಡಿದ್ದಾರೆ.

‘ನಾವು ಸೋತಿದ್ದಕ್ಕೆ ಬೇಸರ ಆಗಿಲ್ಲ’; ಸಿಸಿಎಲ್ ಫೈನಲ್ ಬಳಿಕ ಸುದೀಪ್ ಮಾತು

ಈ ಬಾರಿಯ ಡಬ್ಲ್ಯೂಪಿಎಲ್​ನಲ್ಲೂ ಅನೇಕ ಏಳು-ಬೀಳುಗಳನ್ನು ಕಂಡು ಆರ್​ಸಿಬಿ ಒಟ್ಟು 8 ಪಂದ್ಯಗಳಿಂದ 4 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಎಲಿಮಿನೇಟರ್‌ ರೋಚಕ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಆರಂಭ ಪಡೆಯಿತು. 64 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಬೌಲಿಂಗ್ ಮೂಲಕ ಕಮ್​ಬ್ಯಾಕ್ ಮಾಡಿದ ಬೆಂಗಳೂರು, ಡೆಲ್ಲಿಯನ್ನು 113 ಕ್ಕೆ ಆಲೌಟ್ ಮಾಡಿತು.

ಫೈನಲ್ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಿದ ಸ್ಮೃತಿ ಮಂಧಾನ, ರೀಸ್ ಡಿವೈನ್, ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ 30+ ರನ್‌ಗಳಿಸಿ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ, ”ಇಲ್ಲಿ ಟ್ರೋಫಿ ಗೆದ್ದದ್ದು ನಾನೊಬ್ಬನೇ ಅಲ್ಲ; ತಂಡವು ಟ್ರೋಫಿಯನ್ನು ಗೆದ್ದಿದೆ. ನಮ್ಮದು ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗ. ಈ ಸಲ ಕಪ್ ನಮ್ದೇ ಎನ್ನುವ ಒಂದು ಕೂಗು ಯಾವಾಗಲೂ ಬರುತ್ತಿದೆ. ಈಗ ಈ ಸಲ ಕಪ್ ನಮ್ದು ಆಗಿದೆ. ಕನ್ನಡ ನನ್ನ ಮೊದಲ ಭಾಷೆಯಲ್ಲ, ಆದರೆ ಅದನ್ನು ಅಭಿಮಾನಿಗಳಿಗೆ ಹೇಳುವುದು ಮುಖ್ಯ,” ಎಂದು ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 am, Mon, 18 March 24

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್