- Kannada News Photo gallery Cricket photos Smriti Mandhana in post-match presentation said Ee Sala Cup Namdu DC vs RCB WPL Final
Ee Sala Cup Namdu: ಟ್ರೋಫಿ ಗೆದ್ದ ಬಳಿಕ ಪೋಸ್ಟ್ ಮ್ಯಾಚ್ನಲ್ಲಿ ಸ್ಮೃತಿ ಮಂಧಾನ ಏನು ಹೇಳಿದ್ರು ಗೊತ್ತೇ?
Smriti Mandhana post-match presentation ceremony WPL 2024 Final: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‌ಗಳ ಅಮೋಘ ಗೆಲುವು ಕಂಡು ಆರ್‌ಸಿಬಿ ಕೋಟ್ಯಾಂತರ ಅಭಿಮಾನಿಗಳ ಆಸೆಯನ್ನು ಪೂರೈಸಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಏನು ಹೇಳಿದ್ದಾರೆ ನೋಡಿ.
Updated on: Mar 18, 2024 | 7:20 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳ ಅಮೋಘ ಗೆಲುವು ಕಂಡು ಆರ್‌ಸಿಬಿ ಕೋಟ್ಯಾಂತರ ಅಭಿಮಾನಿಗಳ ಆಸೆಯನ್ನು ಪೂರೈಸಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಏನು ಹೇಳಿದ್ದಾರೆ ನೋಡಿ.

ಇನ್ನೂ ಈ ವಿಶೇಷ ಭಾವನೆಯಲ್ಲಿ ಮುಳುಗಿದ್ದೇನೆ. ನಾನು ಒಂದು ವಿಷಯ ಹೇಳುತ್ತೇನೆ, ನನ್ನ ತಂಡದ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ನಾವು ಬೆಂಗಳೂರಿನಲ್ಲಿ ಆಡಿದ ಪಂದ್ಯ ನಿಜವಾಗಿಯೂ ಚೆನ್ನಾಗಿತ್ತು. ಬಳಿಕ ದೆಹಲಿಗೆ ಬಂದು ಎರಡು ಕಠಿಣ ಸೋಲು ಅನುಭವಿಸಿದೆವೆ. ನಾವು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಆಗ ಪಂದ್ಯ ನಮ್ಮ ಪರವಾಗಿ ಆಗುತ್ತದೆ ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ.

ಕಳೆದ ವರ್ಷ ನಮಗೆ ಬಹಳಷ್ಟು ವಿಷಯಗಳನ್ನು ಕಲಿಸಿದೆ. ನಾವು ಎಲ್ಲಿ ತಪ್ಪು ಮಾಡಿದ್ದೆವು, ಯಾವುದು ಸರಿಯಾಯಿತು ಎಂಬ ಬಗ್ಗೆ ಮ್ಯಾನೇಜ್‌ಮೆಂಟ್ ಹೇಳಿದೆ. ತಪ್ಪನ್ನು ಸರಿಪಡಿಸಿದ ಮ್ಯಾನೇಜ್ಮೆಂಟ್ಗೆ ಧನ್ಯವಾದ. ಇಲ್ಲಿ ಟ್ರೋಫಿ ಗೆದ್ದದ್ದು ನಾನೊಬ್ಬನೇ ಅಲ್ಲ; ತಂಡವು ಟ್ರೋಫಿಯನ್ನು ಗೆದ್ದಿದೆ. ನಮ್ಮದು ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗ. ಈ ಸಲ ಕಪ್ ನಮ್ದೇ ಎನ್ನುವ ಒಂದು ಕೂಗು ಯಾವಾಗಲೂ ಬರುತ್ತಿದೆ. ಈಗ ಈ ಸಲ ಕಪ್ ನಮ್ದು ಆಗಿದೆ. ಕನ್ನಡ ನನ್ನ ಮೊದಲ ಭಾಷೆಯಲ್ಲ, ಆದರೆ ಅದನ್ನು ಅಭಿಮಾನಿಗಳಿಗೆ ಹೇಳುವುದು ಮುಖ್ಯ ಎಂದು ಮಂಧಾನ ಹೇಳಿದ್ದಾರೆ.

ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡ 114 ರನ್‌ಗಳ ಗುರಿಯನ್ನು 19.3 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಬೆನ್ನಟ್ಟಿತು. ಬೆಂಗಳೂರು ನಾಯಕಿ ಮಂಧಾನ 31 ರನ್ ಗಳಿಸಿದರು, ಸೋಫಿ ಡಿವೈನ್ 27 ಎಸೆತಗಳಲ್ಲಿ 32 ರನ್‌ಗಳ ಕೊಡುಗೆ ನೀಡಿದರು. ಎಲ್ಲಿಸ್ ಪೆರ್ರಿ 35 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ, ರಿಚಾ ಘೋಷ್ 14 ಎಸೆತಗಳಲ್ಲಿ 17 ರನ್ ಗಳಿಸಿದರು.

ಆರ್‌ಸಿಬಿ ಪರ ಶ್ರೇಯಾಂಕಾ ಪಾಟೀಲ್ 3.3 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿದರು ಮತ್ತು ಸೋಫಿ ಮೊಲಿನಿಕ್ಸ್ ನಾಲ್ಕು ಓವರ್‌ಗಳಲ್ಲಿ 20 ರನ್ ನೀಡಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಆಶಾ ಸೋಭಾನಾ ಬೌಲಿಂಗ್ನಲ್ಲಿ ಇಬ್ಬರು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳು ಔಟಾದರು. ಮಂಧಾನ ಈ ವರ್ಷ 10 ಪಂದ್ಯಗಳಲ್ಲಿ 300 ರನ್ ಗಳಿಸಿ ತಂಡದ ಸ್ಮರಣೀಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
