‘ನಾವು ಸೋತಿದ್ದಕ್ಕೆ ಬೇಸರ ಆಗಿಲ್ಲ’; ಸಿಸಿಎಲ್ ಫೈನಲ್ ಬಳಿಕ ಸುದೀಪ್ ಮಾತು
ಇನ್ನು ಮಹಿಳಾ ಐಪಿಎಲ್ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದೆ. ಇದಕ್ಕೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಸುದೀಪ್ ಅವರಿಗೂ ಈ ವಿಚಾರ ಖುಷಿ ನೀಡಿದೆ. ಮಹಿಳಾ ತಂಡಕ್ಕೆ ಶುಭ ಕೋರಿದ ಅವರು, ಬೆಂಗಳೂರು ತಂಡಕ್ಕೆ ವಿಶ್ ತಿಳಿಸಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಸಿಸಿಎಲ್ ಪಂದ್ಯದಲ್ಲಿ 12 ರನ್ಗಳ ಸೋಲು ಕಂಡಿದೆ. ಇದು ಸುದೀಪ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ಅಭಿಮಾನಿಗಳಿಗೆ ಬೇಸರ ತಂದಿದೆ. ಫಿನಾಲೆಯವರೆಗೆ ಬಂದು ಕಪ್ ಗೆದ್ದಿಲ್ಲ ಎಂಬ ವಿಚಾರ ಹೆಚ್ಚು ಬೇಸರ ತರಿಸಿದೆ. ಫೈನಲ್ ಬಳಿಕ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ‘ನಾವು ಸೋತಿದ್ದಕ್ಕೆ ಬೇಸರ ಇಲ್ಲ’ ಎಂದು ಸುದೀಪ್ ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.
‘ನಾವು ಸೋತ ಬಗ್ಗೆ ನನಗೆ ಬೇಸರ ಇಲ್ಲ. ನಾವು ತುಂಬಾ ಕಳಪೆ ಪ್ರದರ್ಶನ ನೀಡಿದ್ದರೆ ಬೇಸರ ಆಗುತ್ತಿತ್ತು. ಆದರೆ ಮ್ಯಾಚ್ ಆಡಿದ ರೀತಿಗೆ ತುಂಬಾ ಖುಷಿ ಇದೆ. ನಮ್ಮ ತಂಡ ಕೂಡ ತುಂಬಾ ಚೆನ್ನಾಗಿ ಆಡಿದೆ’ ಎಂದು ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ. ಎರಡೂ ತಂಡಗಳ ಮಧ್ಯೆ ಸಮಬಲದ ಹೋರಾಟ ಇತ್ತು.
ಇದನ್ನೂ ಓದಿ: CCL 2024: ಸಿಸಿಎಲ್ನಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲು; ಗೆದ್ದು ಬೀಗಿದ ಬೆಂಗಾಲ್ ಟೈಗರ್ಸ್
ಇನ್ನು ಮಹಿಳಾ ಐಪಿಎಲ್ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದೆ. ಇದಕ್ಕೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಸುದೀಪ್ ಅವರಿಗೂ ಈ ವಿಚಾರ ಖುಷಿ ನೀಡಿದೆ. ಮಹಿಳಾ ತಂಡಕ್ಕೆ ಶುಭ ಕೋರಿದ ಅವರು, ಬೆಂಗಳೂರು ತಂಡಕ್ಕೆ ವಿಶ್ ತಿಳಿಸಿದ್ದಾರೆ. ‘ಈ ಸಲ ಕಪ್ ನಮ್ಮದಾಗಿದೆ’ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.
ಸ್ಕೋರ್ ವಿವರ..
ಸಿಸಿಎಲ್ನಲ್ಲಿ 10 ಓವರ್ಗಳ ನಾಲ್ಕು ಇನ್ನಿಂಗ್ಸ್ ಆಡಿಸಲಾಗುತ್ತದೆ. ಎರಡೂ ತಂಡಗಳು ತಲಾ 10 ಓವರ್ನ ಎರಡು ಇನ್ನಿಂಗ್ಸ್ ಆಡಬೇಕು. ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ಟೈಗರ್ಸ್ 118 ರನ್ ಹೊಡೆಯಿತು. ಆ ಬಳಿಕ ಕರ್ನಾಟಕ ಬುಲ್ಡೋಜರ್ಸ್ 86 ರನ್ ಗಳಿಸಿತು. ಹೀಗಾಗಿ ಬೆಂಗಾಲ್ ಟೈಗರ್ಸ್ 32 ರನ್ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಬೆಂಗಾಲ್ ಟೈಗರ್ಸ್ 105 ರನ್ ಕಲೆ ಹಾಕಿ, 138 ರನ್ಗಳ ಬೃಹತ್ ಟಾರ್ಗೆಟ್ ನೀಡಿತು. ಬೃಹತ್ ಮೊತ್ತ ಬೆನ್ನು ಹತ್ತಿದ ಕರ್ನಾಟಕ ತಂಡ 10 ಒವರ್ನಲ್ಲಿ 125 ರನ್ ಕಲೆ ಹಾಕಿತು. ಈ ಮೂಲಕ ಬೆಂಗಾಲ್ ಟೈಗರ್ಸ್ ತಂಡ 12 ರನ್ಗಳ ಗೆಲುವು ಕಂಡಿತು. ಒಳ್ಳೆಯ ಫೈಟ್ ಕೊಟ್ಟು ಸೋತೆವು ಎನ್ನುವ ಖುಷಿ ಸುದೀಪ್ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ