CCL 2024: ಸಿಸಿಎಲ್ನಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲು; ಗೆದ್ದು ಬೀಗಿದ ಬೆಂಗಾಲ್ ಟೈಗರ್ಸ್
ಫೆಬ್ರವರಿ 23ರಿಂದ ಸಿಸಿಎಲ್ ಪಂದ್ಯಗಳು ನಡೆದವು. ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮವಾಗಿ ಪ್ರದರ್ಶನ ನೀಡಿತು. ಕ್ವಾಟರ್ ಫೈನಲ್ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದಿದ್ದ ಕರ್ನಾಟಕದ ತಂಡ ಫಿನಾಲೆಯಲ್ಲಿ ಅದೇ ತಂಡದ ವಿರುದ್ಧ ಸೋಲು ಕಂಡಿದೆ. ಬೆಂಗಾಲ್ ಟೈಗರ್ಸ್ ಚಾಂಪಿಯನ್ ಆಗಿದೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ (CCL) ಫೈನಲ್ ಪಂದ್ಯ ಮಾರ್ಚ್ 18ರಂದು ನಡೆದಿದೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ನಡುವಿನ ಪಂದ್ಯದಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲಾಗಿದೆ. ಈ ಮೂಲಕ ಕಪ್ ಮಿಸ್ ಆಗಿದೆ. ಈ ನೋವಿನಲ್ಲೂ ಕಿಚ್ಚ ಸುದೀಪ್ ಅವರು ಮೊದಲ ಬಾರಿ ಕಪ್ ಗೆದ್ದ ಆರ್ಸಿಬಿ ಮಹಿಳಾ ತಂಡಕ್ಕೆ ಶುಭಾಶಯ ಹೇಳಿದ್ದಾರೆ. ಬೆಂಗಾಲ್ ಟೈಗರ್ಸ್ ತಂಡದ ಕ್ಯಾಪ್ಟನ್ ಜಿಶ್ಶು ಸೇನ್ಗುಪ್ತಾಗೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ.
ಫೆಬ್ರವರಿ 23ರಿಂದ ಪ್ರತಿ ವೀಕೆಂಡ್ ಸಿಸಿಎಲ್ ಪಂದ್ಯಗಳು ನಡೆದವು. ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮವಾಗಿ ಪ್ರದರ್ಶನ ನೀಡಿತು. ಕ್ವಾಟರ್ ಫೈನಲ್ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದಿದ್ದ ಕರ್ನಾಟಕದ ತಂಡ ಫಿನಾಲೆಯಲ್ಲಿ ಅದೇ ತಂಡದ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಬೆಂಗಾಲ್ ಟೈಗರ್ಸ್ ಸಿಸಿಎಲ್ ಕಪ್ನ ಮನೆಗೆ ಕೊಂಡೊಯ್ದಿದೆ.
The CCL Trophy has a new home! @BengalTigersccl finally conquers the fortress and emerges victorious. A Decade of Desire, Delivered!#CCL2024 from February 23rd – March 25th and will be Live on JioCinema and Sony Ten 5. #A23 #Parle2020 #CCLSeason10 #DanubeCCLUAE… pic.twitter.com/JfRSDBIiCw
— CCL (@ccl) March 17, 2024
ಸಿಸಿಎಲ್ನಲ್ಲಿ ಹೊಸ ಫಾರ್ಮ್ಯಾಟ್ ಬಳಕೆ ಮಾಡಲಾಗಿದೆ. 10 ಓವರ್ಗಳ ನಾಲ್ಕು ಇನ್ನಿಂಗ್ಸ್ ಇರುತ್ತದೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದವರು 10 ಓವರ್ ಆಡಬೇಕು. ನಂತರ ಎದುರಾಳಿ ತಂಡದವರು 10 ಓವರ್ ಆಡಬೇಕು. ಆ ಬಳಿಕ ಎರಡನೇ ಇನ್ನಿಂಗ್ಸ್ ಕೂಡ ಹೀಗೆಯೇ ಇರುತ್ತದೆ. ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ಟೈಗರ್ಸ್ 118 ರನ್ಗಳನ್ನು ಪೇರಿಸಿತ್ತು. ಏಳು ವಿಕೆಟ್ ನಷ್ಟಕ್ಕೆ ಕರ್ನಾಟಕ ಬುಲ್ಡೋಜರ್ಸ್ 86 ರನ್ಗಳನ್ನು ಕಲೆ ಹಾಕಿತು.
ಇದನ್ನೂ ಓದಿ: CCL 2023: ಕರ್ನಾಟಕ ಬುಲ್ಡೋಝರ್ಸ್ ಮುಂದೆ ಮಂಡಿಯೂರಿದ ಬೆಂಗಾಲ್ ಟೈಗರ್ಸ್
32 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬೆಂಗಾಲ್ ಟೈಗರ್ಸ್ 4 ವಿಕೆಟ್ ನಷ್ಟಕ್ಕೆ 105 ರನ್ ಕಲೆ ಹಾಕಿತು. ಈ ಮೂಲಕ 138 ರನ್ಗಳ ಬೃಹತ್ ಟಾರ್ಗೆಟ್ ನೀಡಿತು. ಕರ್ನಾಟಕ ತಂಡ 10 ಒವರ್ನಲ್ಲಿ 125 ರನ್ ಕಲೆ ಹಾಕಿತು. ಈ ಮೂಲಕ ಬೆಂಗಾಲ್ ಟೈಗರ್ಸ್ ತಂಡ 12 ರನ್ಗಳ ಗೆಲುವು ಕಂಡಿತು. ಒಳ್ಳೆಯ ಫೈಟ್ ಕೊಟ್ಟು ಸೋತೆವು ಎನ್ನುವ ಖುಷಿ ಸುದೀಪ್ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ