AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಂಜುಮ್ಮೇಲ್ ಬಾಯ್ಸ್’ ಬಜೆಟ್ 5 ಕೋಟಿ, ಗಳಿಸಿದ್ದು 180 ಕೋಟಿ ರೂಪಾಯಿ; ಏನಿದೆ ಚಿತ್ರದಲ್ಲಿ?

Manjummel Boys Collection: ‘ಮಂಜುಮ್ಮೇಲ್ ಬಾಯ್ಸ್’ ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಚಿತ್ರದ ಅಬ್ಬರ ನಿಂತಿಲ್ಲ. ಬೆಂಗಳೂರಿನಲ್ಲಿ ಈ ಚಿತ್ರಕ್ಕೆ 180ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಇಲ್ಲಿ ತಂಡದವರು ಬಂದು ಪ್ರಚಾರ ಮಾಡಿಲ್ಲ, ಸುದ್ದಿಗೋಷ್ಠಿ ನಡೆಸಿಲ್ಲ. ಆದಾಗ್ಯೂ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಿಗುತ್ತಿದೆ.

‘ಮಂಜುಮ್ಮೇಲ್ ಬಾಯ್ಸ್’ ಬಜೆಟ್ 5 ಕೋಟಿ, ಗಳಿಸಿದ್ದು 180 ಕೋಟಿ ರೂಪಾಯಿ; ಏನಿದೆ ಚಿತ್ರದಲ್ಲಿ?
ಮಂಜುಮ್ಮೇಲ್ ಬಾಯ್ಸ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 18, 2024 | 8:11 AM

Share

ಫೆಬ್ರವರಿ 22ರಂದು ರಿಲೀಸ್ ಆದ ‘ಮಂಜುಮ್ಮೇಲ್ ಬಾಯ್ಸ್’ (Manjummel Boys) ಸಿನಿಮಾ ಸೂಪರ್ ಹಿಟ್ ಆಗಿದೆ. ಯಾವುದೇ ಸ್ಟಾರ್ ಪಾತ್ರವರ್ಗ ಇಲ್ಲದೆ, ಯಾವುದೇ ಹೀರೋಯಿನ್ ಇಲ್ಲದೆ ಸಿಂಪಲ್ ಆಗಿ ಮೂಡಿ ಬಂದಿರೋ ಈ ಚಿತ್ರ ಮಲಯಾಳಂ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ. ಈ ಮೂಲಕ ‘2018’ ಚಿತ್ರದ ಗಳಿಕೆಯನ್ನು ಇದು ಹಿಂದಿಕ್ಕಿದೆ. ‘ಮಂಜುಮ್ಮೇಲ್ ಬಾಯ್ಸ್’ ಚಿತ್ರವನ್ನು ಚಿದಂಬರಂ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ನಿರ್ದೇಶನದ ಎರಡನೇ ಸಿನಿಮಾ.

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ರಿಲೀಸ್ ಮಾಡೋದು ನಿರ್ಮಾಪಕರಿಗೆ ಕಷ್ಟ ಆಗಿತ್ತು. ಆದರೂ ಕಷ್ಟಪಟ್ಟು ಸಿನಿಮಾ ರಿಲೀಸ್ ಮಾಡಲಾಯಿತು. ಈಗ ಚಿತ್ರ ವಿಶ್ವಾದ್ಯಂತ 180 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಮಾಲಿವುಡ್​ನಲ್ಲಿ ಸಿನಿಮಾ ದಾಖಲೆ ಬರೆದಿದೆ. ಸಿನಿಮಾ ಯಶಸ್ಸನ್ನು ತಂಡದವರು ಸಂಭ್ರಮಿಸಿದ್ದು, ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

ಭಾರತದಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ 120 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವದ ವಿವಿಧ ಭಾಗದಲ್ಲಿ ಸಿನಿಮಾಗೆ ಬೇಡಿಕೆ ಬಂದಿದ್ದು, 60 ಕೋಟಿ ರೂಪಾಯಿ ಹೊರ ದೇಶಗಳಿಂದ ಬಂದಿದೆ. ಇದು ಸಿನಿಮಾದ ಗೆಲುವಿಗೆ ಕಾರಣ ಆಗಿದೆ. ಮಲಯಾಳಂ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿದೆ.

ಇದನ್ನೂ ಓದಿ: ಯಕ್ಷಿಣಿ ಅವತಾರವೆತ್ತಿದ ಅನುಷ್ಕಾ ಶೆಟ್ಟಿ, ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ

ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಚಿತ್ರದ ಅಬ್ಬರ ನಿಂತಿಲ್ಲ. ಬೆಂಗಳೂರಿನಲ್ಲಿ ಈ ಚಿತ್ರಕ್ಕೆ 180ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಇಲ್ಲಿ ತಂಡದವರು ಬಂದು ಪ್ರಚಾರ ಮಾಡಿಲ್ಲ, ಸುದ್ದಿಗೋಷ್ಠಿ ನಡೆಸಿಲ್ಲ. ಆದಾಗ್ಯೂ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಿಗುತ್ತಿದೆ. ಇದರಿಂದ ವೀಕೆಂಡ್​ಗಳಲ್ಲಿ ಹಲವು ಶೋಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತಿವೆ.

ಬಜೆಟ್ ಹಾಗೂ ಗಳಿಕೆ

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದ ಬಜೆಟ್ 4-5 ಕೋಟಿ ರೂಪಾಯಿ ಇದೆ ಎಂದು ಅಂದಾಜಿಸಲಾಗಿದೆ. ಆದರೆ, ಸಿನಿಮಾದ ಗಳಿಕೆ ಮಿತಿ ಮೀರಿದೆ. ಈ ಚಿತ್ರದಲ್ಲಿ ಸೌಬಿನ್ ಶಬೀರ್, ಶ್ರೀನಾತ್ ಭಾಶಿ, ಬಾಲು ವರ್ಗೀಶ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲಿ ಸೌಬಿನ್ ಶಬೀರ್ ಅವರದ್ದು ದೊಡ್ಡ ಪಾಲಿದೆ.

ಏನಿದೆ ಸಿನಿಮಾದಲ್ಲಿ?

ಅದು 2006ರಲ್ಲಿ ನಡೆದ ಘಟನೆ. ಕೇರಳದಿಂದ ತಮಿಳುನಾಡಿನ ಕೊಡೈಕೆನಲ್​ಗೆ ಫ್ರೆಂಡ್ಸ್ ಗ್ರೂಪ್ ಒಂದು ಟ್ರಿಪ್ ತೆರಳುತ್ತದೆ. ಇಲ್ಲಿ ಗುಣ ಕೇವ್​​ನಲ್ಲಿ ಡೆವಿಲ್ಸ್ ಕಿಚನ್ ಹೆಸರಿನ ದೊಡ್ಡ ಹೊಂಡ ಇದೆ. ಇದು ತುಂಬಾನೇ ಆಳ ಇರುತ್ತದೆ. ಇದರಲ್ಲಿ ಸುಭಾಷ್ ಎಂಬಾತ ಬೀಳುತ್ತಾನೆ. ಆತನ ರಕ್ಷಿಸಲು ಫ್ರೆಂಡ್ಸ್ ಪ್ರಯತ್ನಿಸುತ್ತಾರೆ. ಕೊನೆಗೆ ಯಶಸ್ವಿ ಆಗುತ್ತಾರೋ ಅಥವಾ ಇಲ್ಲವೋ ಎನ್ನುವುದೇ ಕಥೆ. ಈ ಚಿತ್ರವನ್ನು ಮೈನವಿರೇಳುವ ರೀತಿಯಲ್ಲಿ ಕಟ್ಟಿಕೊಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ
ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ