AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬುಲ್ಡೋಜರ್ಸ್​ ಆಟಗಾರರಿಗೆ ತಿಲಕ ಇಟ್ಟು ವಿಶ್​ ಮಾಡಿದ ಪ್ರಿಯಾ ಸುದೀಪ್​

ಕರ್ನಾಟಕ ಬುಲ್ಡೋಜರ್ಸ್​ ಆಟಗಾರರಿಗೆ ತಿಲಕ ಇಟ್ಟು ವಿಶ್​ ಮಾಡಿದ ಪ್ರಿಯಾ ಸುದೀಪ್​

ಮದನ್​ ಕುಮಾರ್​
|

Updated on: Mar 17, 2024 | 9:03 PM

Share

ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸಿಸಿಎಲ್​ನ ಫೈನಲ್​ ಪಂದ್ಯದಲ್ಲಿ ಬೆಂಗಾಲ್​ ಟೈಗರ್ಸ್​ ತಂಡದ ಎದುರು ಹಣಾಹಣಿ ನಡೆಸುತ್ತಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್​ ತಂಡದ ಆಟಗಾರರನ್ನು ಹುರಿದುಂಬಿಸಲು ಅನೇಕ ತಾರೆಯರು ತಿರುವನಂತಪುರಂಗೆ ತೆರಳಿದ್ದಾರೆ. ಪ್ರಿಯಾ ಸುದೀಪ್​ ಅವರು ಕರ್ನಾಟಕ ಬುಲ್ಡೋಜರ್ಸ್​ ಆಟಗಾರರಿಗೆ ತಿಲಕ ಇಟ್ಟು ವಿಶ್​ ಮಾಡಿದ್ದಾರೆ.

ತಿರುವನಂತಪುರಂನಲ್ಲಿ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್​’ (Celebrity Cricket League) ಫೈನಲ್​ ಪಂದ್ಯ ನಡೆಯುತ್ತಿದೆ. ಕರ್ನಾಟಕ ಬುಲ್ಡೋಜರ್ಸ್​ ಮತ್ತು ಬೆಂಗಾಲ್​ ಟೈಗರ್ಸ್​ ತಂಡಗಳು ಅಂತಿಮ ಪಂದ್ಯದಲ್ಲಿ ಹಣಾಹಣಿ ನಡೆಸುತ್ತಿವೆ. 10 ಓವರ್​ಗಳ ಎರಡು ಇನ್ನಿಂಗ್ಸ್​ನಲ್ಲಿ ಸೆಣೆಸಾಟ ನಡೆಯುತ್ತಿದೆ. ಕರ್ನಾಟಕ ಬುಲ್ಡೋಜರ್ಸ್​ (Karnataka Bulldozers) ಕಂಡದಲ್ಲಿ ಕಿಚ್ಚ ಸುದೀಪ್​, ಜೆಕೆ, ಡಾರ್ಲಿಂಗ್​ ಕೃಷ್ಣ, ಸುನೀಲ್​ ರಾವ್​, ಪ್ರದೀಪ್​ ಮುಂತಾದವರು ಆಡುತ್ತಿದ್ದಾರೆ. ಆಟಗಾರರನ್ನು ಹುರಿದುಂಬಿಸಲು ಕನ್ನಡ ಚಿತ್ರರಂಗದ ಅನೇಕ ತಾರೆಯರು ತಿರುವನಂತಪುರಂಗೆ ತೆರಳಿದ್ದಾರೆ. ಕಿಚ್ಚ ಸುದೀಪ್​ ಅವರ ಪತ್ನಿ ಪ್ರಿಯಾ ಕೂಡ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್​ ತಂಡದ ಆಟಗಾರರಿಗೆ ತಿಲಕ ಇಟ್ಟು ಪ್ರಿಯಾ ಸುದೀಪ್​ (Priya Sudeep) ಅವರು ಆಲ್​ದಿ ಬೆಸ್ಟ್​ ಹೇಳಿದ್ದಾರೆ. ಬೆಂಗಾಲ್​ ಟೈಗರ್ಸ್​ ತಂಡವು 10 ಓವರ್​ಗಳ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಿ 118 ರನ್​ ಕಲೆಹಾಕಿದೆ. ಕರ್ನಾಟಕ ಬುಲ್ಡೋಜರ್ಸ್​ ಗೆಲ್ಲಬೇಕು ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ನಟನೆಯ ಜೊತೆಗೆ ಕ್ರಿಕೆಟ್​ನಲ್ಲೂ ಅಪಾರ ಆಸಕ್ತಿ ಹೊಂದಿದ್ದಾರೆ. ಸಿಸಿಎಲ್​ನಲ್ಲಿ ಅವರು ಸಕ್ರಿಯವಾಗಿ ಭಾಗಿ ಆಗುತ್ತಾರೆ. ಎಲ್ಲ ಭಾಷೆಯ ಸೆಲೆಬ್ರಿಟಿಗಳನ್ನು ಒಂದೆಡೆ ಸೇರಿಸುವಲ್ಲಿಯೂ ಸಿಸಿಎಲ್​ ಮಹತ್ವದ ಪಾತ್ರ ವಹಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More