CCL 2023: ಕರ್ನಾಟಕ ಬುಲ್ಡೋಝರ್ಸ್ ಮುಂದೆ ಮಂಡಿಯೂರಿದ ಬೆಂಗಾಲ್ ಟೈಗರ್ಸ್

Karnataka Bulldozers vs Bengal Tigers: ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು 5 ವಿಕೆಟ್ ನಷ್ಟಕ್ಕೆ 93 ರನ್ ಪೇರಿಸಿತು. 20 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬೆಂಗಾಲ್ ತಂಡವು 6 ವಿಕೆಟ್ ನಷ್ಟಕ್ಕೆ 76 ರನ್​ಗಳಿಸಲಷ್ಟೇ ಶಕ್ತರಾದರು.

CCL 2023: ಕರ್ನಾಟಕ ಬುಲ್ಡೋಝರ್ಸ್ ಮುಂದೆ ಮಂಡಿಯೂರಿದ ಬೆಂಗಾಲ್ ಟೈಗರ್ಸ್
Karnataka Bulldozers
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 18, 2023 | 7:31 PM

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಝರ್ಸ್ ತಂಡವು 8 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ತಲಾ 10 ಓವರ್​ಗಳಂತೆ ನಾಲ್ಕು ಇನಿಂಗ್ಸ್ ಮೂಲಕ ಆಡಲಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ಟೈಗರ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಮೊದಲ 10 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 73 ರನ್​ ಕಲೆಹಾಕಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು 5 ವಿಕೆಟ್ ನಷ್ಟಕ್ಕೆ 93 ರನ್ ಪೇರಿಸಿತು. 20 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬೆಂಗಾಲ್ ತಂಡವು 6 ವಿಕೆಟ್ ನಷ್ಟಕ್ಕೆ 76 ರನ್​ಗಳಿಸಲಷ್ಟೇ ಶಕ್ತರಾದರು.

ಮೊದಲ ಇನಿಂಗ್ಸ್​ನ 20 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ ಕರ್ನಾಟಕ ತಂಡಕ್ಕೆ ಗೆಲ್ಲಲು 57 ರನ್​ಗಳ ಅವಶ್ಯಕತೆಯಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಬುಲ್ಡೋಝರ್ಸ್ ಪರ ರಾಜೀವ್ 11 ಎಸೆತಗಳಲ್ಲಿ 23 ರನ್​ ಬಾರಿಸಿದರು. ಹಾಗೆಯೇ ಕಿಚ್ಚ ಸುದೀಪ್ 11 ಎಸೆತಗಳಲ್ಲಿ 15 ರನ್​ ಬಾರಿಸಿ ಉತ್ತಮ ಸಾಥ್ ನೀಡಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗೋಲ್ಡನ್ ಸ್ಟಾರ್ ಗಣೇಶ್ 10 ರನ್​ಗಳಿಸಿದರು.

ಪರಿಣಾಮ 6.4 ಓವರ್​ನಲ್ಲಿ 57 ರನ್​ ಬಾರಿಸಿ ಕರ್ನಾಟಕ ಬುಲ್ಡೋಝರ್ಸ್ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 2023 ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ.

ಕರ್ನಾಟಕ ಬುಲ್ಡೋಝರ್ಸ್ ತಂಡ: ಪ್ರದೀಪ್, ರಾಜೀವ್ ಹೆಚ್, ಕಿಚ್ಚ ಸುದೀಪ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಪ್ರತಾಪ್, ಪ್ರಸನ್ನ, ಶಿವರಾಜ್​ ಕುಮಾರ್, ಗಣೇಶ್, ಕೃಷ್ಣ, ಸೌರವ್ ಲೋಕೇಶ್, ಚಂದನ್, ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ನಂದ ಕಿಶೋರ್, ಸಾಗರ್ ಗೌಡ.

ಬೆಂಗಾಲ್ ಟೈಗರ್ಸ್ ತಂಡ: ಉದಯ್, ಇಂದ್ರಶಿಶ್, ಮೋಹನ್, ಸುಮನ್, ಜಾಯ್, ಜೋ, ಯೂಸುಫ್, ಜೀತು ಕಮಲ್, ಜಮ್ಮಿ, ರತ್ನದೀಪ್ ಘೋಷ್, ಆನಂದ ಚೌಧರಿ, ಸ್ಯಾಂಡಿ, ಆದಿತ್ಯ ರಾಯ್ ಬ್ಯಾನರ್ಜಿ, ಅರ್ಮಾನ್ ಅಹಮದ್, ಮಾಂಟಿ, ರಾಹುಲ್ ಮಜುಂದಾರ್, ಗೌರವ್ ಚಕ್ರವರ್ತಿ, ಬೋನಿ, ಸೌರವ್ ದಾಸ್.

ಈ ಪಂದ್ಯಗಳನ್ನು ಯಾವ ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು?

  •  ಝೀ ಅನ್ಮೋಲ್ ಸಿನಿಮಾ – ಹಿಂದಿ
  •  & ಪಿಚ್ಚರ್ಸ್​ – ಇಂಗ್ಲೀಷ್
  •  ಝೀ ತಿರೈ – ತಮಿಳು
  •  ಝೀ ಸಿನಿಮಾಲು – ತೆಲುಗು
  •  ಝೀ ಪಿಚ್ಚರ್ – ಕನ್ನಡ
  •  ಫ್ಲವರ್ಸ್ ಟಿವಿ – ಮಲಯಾಳಂ
  •  PTC ಪಂಜಾಬಿ – ಪಂಜಾಬಿ
  •  ಝೀ ಬಾಂಗ್ಲಾ ಸಿನಿಮಾ – ಬಾಂಗ್ಲಾ
  •  ಝೀ ಬಿಸ್ಕೋಪ್ – ಭೋಜ್‌ಪುರಿ

ಹಾಗೆಯೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ ಯೂಟ್ಯೂಬ್ ಚಾನೆಲ್​ನಲ್ಲೂ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.

Published On - 7:12 pm, Sat, 18 February 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ