ಬಿಜೆಪಿ ಒಂದು ಮತೀಯ ಹಾಗೂ ಕೋಮುವಾದಿ ಪಕ್ಷ, ಜೆಡಿಎಸ್ ಮೈತ್ರಿಗೆ ಹೋಗಿರುವುದು ಆಶ್ಚರ್ಯ: ಬಿಎನ್ ಬಚ್ಚೇಗೌಡ, ಬಿಜೆಪಿ ಸಂಸದ

|

Updated on: Sep 08, 2023 | 5:44 PM

ಜಾತ್ಯಾತೀತ ಅಂತ ಹೆಸರಿಟ್ಟುಕೊಂಡು ಒಂದು ಕೋಮುವಾದಿ ಪಕ್ಷದ ಜೊತೆ ಸ್ನೇಹ ಬೆಳೆಸಲು ಹೊರಟಿದ್ದಾರೆ, ಇದು ತಮ್ಮಲ್ಲಿ ಆಶ್ಚರ್ಯ ಹುಟ್ಟಿಸಿದೆ ಎಂದು ಬಚ್ಚೇಗೌಡ ಹೇಳಿದರು. ಸರ್ ನೀವು ಬಿಜೆಪಿ ಸಂಸದರು ಅಲ್ವಾ ಅಂತ ಕೇಳಿದಾಗ, ಹೌದು ನಿಜ, ಹಾಗಂತ ಪಕ್ಷ ಮಾಡಿದ್ದನ್ನೆಲ್ಲ ಸರಿ ಅಂತ ಹೇಳಲಾಗಲ್ಲ. ನನಗೂ ಸಾಕಷ್ಟು ಅನುಭವವಾಗಿದೆ, ಕೆಲವು ಸಲ ಸುಮ್ಮನಿರಬೇಕಾಗುತ್ತದೆ ಎಂದು ಹೇಳಿದರು.  

ಚಿಕ್ಕಬಳ್ಳಾಪುರ: ಬಿಜೆಪಿ ಒಂದು ಮತೀಯ ಪಕ್ಷ, ಕೋಮುವಾದಿ ಪಕ್ಷ-ಅಂತ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದರೆ ಅದರಲ್ಲಿ ಹೊಸತೇನೂ ಇರುತ್ತಿರಲಿಲ್ಲ ಮಾರಾಯ್ರೇ. ಆದರೆ ಅದನ್ನು ಯಾರು ಹೇಳುತ್ತಿದ್ದಾರೆ ಅಂತ ಒಮ್ಮೆ ನೋಡಿ! ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ (BN Bache Gowda)! ಗೌಡರು ನೇರ, ನಿರ್ಭಿಡೆ ಮಾತಿಗಳಿಗೆ ಹೆಸರಾದವರು ಅಂತ ಕನ್ನಡಿಗರಿಗೆ ಗೊತ್ತು. ಮೊನ್ನೆಯಷ್ಟೇ ಅವರು ಸಕ್ರಿಯ ರಾಜಕಾರಣಕ್ಕೆ (electoral politics) ವಿದಾಯ ಘೋಷಿಸಿದ್ದರು. ಇಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆದ ದಿಶಾ ಸಭೆಯಲ್ಲಿ (DISHA meeting) ಮಾತಾಡಿದ ಗೌಡರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಜೆಡಿಎಸ್ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಜಾತ್ಯಾತೀತ ಅಂತ ಹೆಸರಿಟ್ಟುಕೊಂಡು ಒಂದು ಕೋಮುವಾದಿ ಪಕ್ಷದ ಜೊತೆ ಸ್ನೇಹ ಬೆಳೆಸಲು ಹೊರಟಿದ್ದಾರೆ, ಇದು ತಮ್ಮಲ್ಲಿ ಆಶ್ಚರ್ಯ ಹುಟ್ಟಿಸಿದೆ ಎಂದು ಬಚ್ಚೇಗೌಡ ಹೇಳಿದರು. ಸರ್ ನೀವು ಬಿಜೆಪಿ ಸಂಸದರು ಅಲ್ವಾ ಅಂತ ಕೇಳಿದಾಗ, ಹೌದು ನಿಜ, ಹಾಗಂತ ಪಕ್ಷ ಮಾಡಿದ್ದನ್ನೆಲ್ಲ ಸರಿ ಅಂತ ಹೇಳಲಾಗಲ್ಲ. ನನಗೂ ಸಾಕಷ್ಟು ಅನುಭವವಾಗಿದೆ, ಕೆಲವು ಸಲ ಸುಮ್ಮನಿರಬೇಕಾಗುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ